ಬೆಂಗಳೂರು: ಫಿಯಟ್ ಕ್ರಿಸ್ಲರ್ ಆಟೊಮೊಬೈಲ್ಸ್ (ಎಫ್ಸಿಎ) ಕಂಪನಿಯು ಹೈದರಾಬಾದ್ನಲ್ಲಿ ಆರಂಭಿಸಲಿರುವ ಡಿಜಿಟಲ್ ಹಬ್ನ ತಂತ್ರಜ್ಞಾನ ಸೇವಾ ಪಾಲುದಾರ ಆಗಿ ವಿಪ್ರೊ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಎಫ್ಸಿಎ ಕಂಪನಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳಿಗೆ ಈ ಹಬ್ ನೆರವಾಗಲಿದೆ. ವಿಪ್ರೊ ಕಂಪನಿಯು ಒಂದು ಸಾವಿರಕ್ಕಿಂತ ಹೆಚ್ಚಿನ ಜನರಿರುವ ಕುಶಲ ತಂತ್ರಜ್ಞರ ತಂಡವನ್ನು ಈ ಹಬ್ಗೆ ಸಿದ್ಧಪಡಿಸಿ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.