ADVERTISEMENT

ಹಣಕಾಸು ಕಂಪನಿಗಳಿಂದ ತ್ವರಿತ ಮಾಹಿತಿ ಕೇಳಿದ ಕೇಂದ್ರ

ಪಿಟಿಐ
Published 28 ಡಿಸೆಂಬರ್ 2025, 14:32 IST
Last Updated 28 ಡಿಸೆಂಬರ್ 2025, 14:32 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಬ್ಯಾಂಕೇತರ ಹಣಕಾಸು ಕಂಪನಿ, ವಿಮಾ ಕಂಪನಿಗಳು ತಮ್ಮ ಪೂರ್ಣಾವಧಿ ನಿರ್ದೇಶಕರಿಗೆ ಸಂಬಂಧಿಸಿದ ವಿಚಕ್ಷಣಾ ವಿಚಾರವನ್ನು ಅವು ಗಮನಕ್ಕೆ ಬಂದ ತಕ್ಷಣ ತಿಳಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ನಿರ್ದೇಶನ ನೀಡಿದೆ.

ADVERTISEMENT

ಹಣಕಾಸು ಕಂಪನಿಗಳು ತಮ್ಮ ಆಡಳಿತ ಮಂಡಳಿಯ ಪೂರ್ಣಾವಧಿ ನಿರ್ದೇಶಕರಿಗೆ ಸಂಬಂಧಿಸಿದ, ಅವರ ವಿರುದ್ಧ ದಾಖಲಾದ ವಿಚಾರಗಳ ಮಾಹಿತಿಯನ್ನು ತಮ್ಮ ಗಮನಕ್ಕೆ ಬಂದ ತಕ್ಷಣ ಒದಗಿಸುತ್ತಿಲ್ಲ. ಹೀಗಾಗಿ ಹಣಕಾಸು ಸಚಿವಾಲಯದ ಅಧೀನದ ಹಣಕಾಸು ಸೇವೆಗಳ ಇಲಾಖೆಯು ಈ ನಿರ್ದೇಶನ ನೀಡಿದೆ.

ಹಲವಾರು ಪ್ರಕರಣಗಳಲ್ಲಿ, ಖಾಸಗಿ ದೂರುಗಳು, ನ್ಯಾಯಾಲಯ ಹೇಳಿದ ಮಾತುಗಳನ್ನು, ಸಿಬಿಐ ಅಥವಾ ಇತರೆ ಕಾನೂನು ಜಾರಿ ಸಂಸ್ಥೆಗಳಿಂದ ಬಂದಿರುವ ಮಾಹಿತಿಗಳನ್ನು ನಿರ್ದಿಷ್ಟವಾಗಿ ಕೋರಿದಾಗ ಮಾತ್ರ ನೀಡಲಾಗುತ್ತಿದೆ ಎಂದು ಹೇಳಿದೆ.

ನೇಮಕಾತಿ, ಬಡ್ತಿ, ಆಡಳಿತ ಮಂಡಳಿಯ ಹುದ್ದೆಗಳು, ಪೂರ್ಣಾವಧಿ ನಿರ್ದೇಶಕರ ನಿಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡದೇ ಇರುವುದು ಗಂಭೀರ, ಕಳವಳಕಾರಿ ವಿಷಯ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.