ನವದೆಹಲಿ: ಕೇಂದ್ರ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಿನ ಅಂತರವಾದ ವಿತ್ತೀಯ ಕೊರತೆಯು 2024–25ನೇ ಆರ್ಥಿಕ ವರ್ಷದ ಎಂಟು ತಿಂಗಳ ಅವಧಿಯಲ್ಲಿ ಇಡೀ ವರ್ಷದ ಗುರಿಯ ಶೇ 52.5ರಷ್ಟು ಆಗಿದೆ.
ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ವಿತ್ತೀಯ ಕೊರತೆಯು ₹8.47 ಲಕ್ಷ ಕೋಟಿ ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಮಂಗಳವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
2023–24ರಲ್ಲಿ ವಿತ್ತೀಯ ಕೊರತೆಯು ಶೇ 5.6ರಷ್ಟಿತ್ತು. 2024–25ರಲ್ಲಿ ಇದನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.9ಕ್ಕೆ ತಗ್ಗಿಸಲು ಸರ್ಕಾರವು ಬಜೆಟ್‌ನಲ್ಲಿ ಗುರಿ ನಿಗದಿಪಡಿಸಿದೆ. ಇದು ಮೌಲ್ಯದ ಲೆಕ್ಕದಲ್ಲಿ ₹16.13 ಲಕ್ಷ ಕೋಟಿ ಆಗಿದೆ.
ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ₹14.43 ಲಕ್ಷ ಕೋಟಿ ನಿವ್ವಳ ತೆರಿಗೆ ಸಂಗ್ರಹವಾಗಿದೆ. ಇದೇ ಅವಧಿಯಲ್ಲಿ ಸರ್ಕಾರದ ವೆಚ್ಚವು ₹27.47 ಲಕ್ಷ ಕೋಟಿ ಆಗಿದೆ (ಶೇ 56.9ರಷ್ಟು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.