ADVERTISEMENT

ಅಗತ್ಯ ವಸ್ತು ವಿತರಣೆ: ಫ್ಲಿಪ್‌ಕಾರ್ಟ್‌, ಮೆರು ಒಪ್ಪಂದ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 19:30 IST
Last Updated 29 ಏಪ್ರಿಲ್ 2020, 19:30 IST
   

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ಇ-ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್ ಮತ್ತು ಆ್ಯಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಮೆರು ಒಪ್ಪಂದ ಮಾಡಿಕೊಂಡಿವೆ.

ಬೆಂಗಳೂರು, ದೆಹಲಿ ಎನ್‌ಸಿಆರ್ ಮತ್ತು ಹೈದರಾಬಾದ್ ನಗರಗಳ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಸುರಕ್ಷಿತ ರೀತಿಯಲ್ಲಿ ಅಗತ್ಯ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಈ ಒಪ್ಪಂದ ನೆರವಾಗಲಿದೆ.

‘ನಾವು ಸುರಕ್ಷಿತವಾದ ಪೂರೈಕೆ ಜಾಲ ಹೊಂದಿದ್ದೇವೆ. ಸರಕುಗಳ ಪೂರೈಕೆ, ವಿತರಣೆ ವ್ಯವಸ್ಥೆಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುತ್ತಿದ್ದೇವೆ. ಮೆರು ಸಹಭಾಗಿತ್ವದಿಂದ ಗ್ರಾಹಕರಿಗೆ ಸಕಾಲದಲ್ಲಿ ಅಗತ್ಯ ವಸ್ತು ವಿತರಿಸಲಿದ್ದೇವೆ.ಸ್ಯಾನಿಟೈಸರ್ ಬಳಕೆ, ಮುಖಗವಸು ಧರಿಸಲು ಮೆರು ಚಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಫ್ಲಿಪ್‌ಕಾರ್ಟ್ ಗ್ರೂಪ್‌ನ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.