ADVERTISEMENT

ಅದಾನಿ ಸಮೂಹದೊಂದಿಗೆ ಫ್ಲಿಪ್‌ಕಾರ್ಟ್‌ ಪಾಲುದಾರಿಕೆ

ಪಿಟಿಐ
Published 12 ಏಪ್ರಿಲ್ 2021, 6:22 IST
Last Updated 12 ಏಪ್ರಿಲ್ 2021, 6:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತನ್ನ ಲಾಜಿಸ್ಟಿಕ್ಸ್‌ ಮತ್ತು ಡೇಟಾ ಸೆಂಟರ್‌ನ ಸಾಮರ್ಥ್ಯಗಳನ್ನು ಹೆಚ್ಚಿಸಲು ಹಾಗೂ 2,500ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಕಂಪನಿಯು ಅದಾನಿ ಸಮೂಹದೊಂದಿಗೆ ವಾಣಿಜ್ಯ ಪಾಲುದಾರಿಕೆಗೆ ಸಹಿ ಹಾಕಿದೆ.

ತನ್ನ ಪೂರೈಕೆ ಸರಪಳಿಯ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಗ್ರಾಹಕರಿಗೆ ಸೇವೆಯನ್ನು ತ್ವರಿತವಾಗಿ ಪೂರೈಸುವ ಉದ್ದೇಶದಿಂದ ಅದಾನಿ ಲಾಜಿಸ್ಟಿಕ್ಸ್‌ ಲಿಮಿಟೆಡ್‌ನೊಂದಿಗೆ ಫ್ಲಿಪ್‌ಕಾರ್ಟ್‌ ಕೆಲಸ ಮಾಡಲಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್‌ ಹೇಳಿಕೆ ಬಿಡುಗಡೆ ಮಾಡಿದೆ.

ಚೈನ್ನೈನಲ್ಲಿರುವ ಅದಾನಿಕಾನೆಕ್ಸ್‌ನಲ್ಲಿ ಫ್ಲಿಪ್‌ಕಾರ್ಟ್‌ ತನ್ನ ಮೂರನೇ ಡೇಟಾ ಸೆಂಟರ್‌ ಅನ್ನು ಕೂಡ ನಿರ್ಮಿಸಲಿದೆ. ‘ಅದಾನಿಕಾನೆಕ್ಸ್‌’ ಎಡ್ಜ್‌ಕಾನೆಕ್ಸ್‌ ಮತ್ತು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ನಡುವಿನ ಹೊಸ ಜಂಟಿ ಉದ್ಯಮವಾಗಿದೆ.

ADVERTISEMENT

ಅಂದಾನಿ ಲಾಜಿಸ್ಟಿಕ್ಸ್‌ ಲಿಮಿಟೆಡ್‌ ಮುಂಬೈನಲ್ಲಿ ಲಾಜಿಸ್ಟಿಕ್ಸ್‌ ಹಬ್‌ ಅನ್ನು ನಿರ್ಮಿಸುತ್ತಿದೆ. ಈ ಹಬ್‌ನಲ್ಲಿ ಅಂದಾನಿ ಸಂಸ್ಥೆಯು 5.34 ಲಕ್ಷ ಚದರ ಅಡಿಯ ಗೋದಾಮು ನಿರ್ಮಿಸಲಿದೆ.

ವಾಣಿಜ್ಯ ಸಹಭಾಗಿತ್ವದಡಿಯಲ್ಲಿ ಅಂದಾನಿ ಸಂಸ್ಥೆಯು ಈ ಗೋದಾಮು ಅನ್ನು ಫ್ಲಿಪ್‌ಕಾರ್ಟ್‌ಗೆ ಗುತ್ತಿಗೆ ರೂಪದಲ್ಲಿ ನೀಡಲಿದೆ. ಈ ಮೂಲಕ ಫ್ಲಿಪ್‌ಕಾರ್ಟ್‌ ಸಂಸ್ಥೆಯು ಪಶ್ಚಿಮ ಭಾರತದಲ್ಲಿ ಹೆಚ್ಚುತ್ತಿರುವ ಇ-ಕಾಮರ್ಸ್ ಬೇಡಿಕೆಯನ್ನು ಪೂರೈಸಲಿದೆ. ಅಲ್ಲದೆ ಸಣ್ಣ, ಮಧ್ಯಮ ವರ್ಗ ಹಾಗೂ ಸಾವಿರಾರು ಮಾರಾಟಗಾರರನ್ನು ಬೆಂಬಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.