ADVERTISEMENT

ಹಣ್ಣುಗಳ ರಫ್ತು ‍ಪ್ರಮಾಣ ಶೇ 47.5ರಷ್ಟು ಹೆಚ್ಚಳ: ಕೇಂದ್ರ ಸರ್ಕಾರ

ಪಿಟಿಐ
Published 29 ಮಾರ್ಚ್ 2025, 14:15 IST
Last Updated 29 ಮಾರ್ಚ್ 2025, 14:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ದೇಶದಿಂದ ಹಣ್ಣುಗಳ ರಫ್ತು ‍ಪ್ರಮಾಣವು ಶೇ 47.5ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಯುಎಇ ಮತ್ತು ಆಸ್ಟ್ರೇಲಿಯಾದ ಜೊತೆಗೆ ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವು ಹಣ್ಣುಗಳ ರಫ್ತು ಪ್ರಮಾಣದ ಹೆಚ್ಚಳಕ್ಕೆ ನೆರವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಹಣ್ಣುಗಳ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ದೇಶದಿಂದ ಪ್ರಮುಖವಾಗಿ ಮಾವು, ದ್ರಾಕ್ಷಿ, ಬಾಳೆಹಣ್ಣು, ಸೇಬು, ಅನಾನಸ್‌, ದಾಳಿಂಬೆ ಮತ್ತು ಕಲ್ಲಂಗಡಿಯನ್ನು ರಫ್ತು ಮಾಡಲಾಗುತ್ತದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.