ADVERTISEMENT

ಸತತ ಮೂರನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

ಏಜೆನ್ಸೀಸ್
Published 9 ಜೂನ್ 2020, 5:36 IST
Last Updated 9 ಜೂನ್ 2020, 5:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಮಂಗಳವಾರ ಪ್ರತಿ ಲೀಟರ್‌ಗೆ ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೇಶದಲ್ಲಿ ಇಂಧನ ದರ ಸತತ ಮೂರನೇ ದಿನ ಹೆಚ್ಚಳವಾದಂತಾಗಿದೆ.

ಬೆಲೆ ಹೆಚ್ಚಳದ ಬಳಿಕ, ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹73 ಆಗಿದ್ದು, ಡೀಸೆಲ್ ದರ ₹71.17 ಆಗಿದೆ.

ಮಾರ್ಚ್‌ ಮಧ್ಯಭಾಗದಿಂದ ಇಂಧನ ದರ ಪ್ರತಿ ದಿನ ಪರಿಷ್ಕರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಳಿಕೆಯಾಗುತ್ತಿರಲಿಲ್ಲ. ಭಾನುವಾರದಿಂದ ತೈಲ ಕಂಪನಿಗಳು ದರ ಪರಿಷ್ಕರಣೆ ಮತ್ತೆ ಆರಂಭಿಸಿವೆ.

ADVERTISEMENT

ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಳ ಮಾಡಲಾಗಿತ್ತು.

ಕಚ್ಚಾ ತೈಲ ಬೆಲೆ ಕುಸಿತದ ಲಾಭ ಪಡೆಯಲು ಸರ್ಕಾರ ಮಾರ್ಚ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹ 3ರಂತೆ ಹೆಚ್ಚಿಸಿತ್ತು. ಮೇ 6 ರಂದು ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕ್ರಮವಾಗಿ ₹ 10 ಮತ್ತು ₹ 13ರಂತೆ ಅಬಕಾರಿ ಸುಂಕ ವಿಧಿಸಿತ್ತು. ಆದರೆ, ತೈಲ ಮಾರಾಟ ಕಂಪನಿಗಳು ಅಬಕಾರಿ ಸುಂಕ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.