ADVERTISEMENT

ಚಿನ್ನದ ಆಮದು ಇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 22:30 IST
Last Updated 2 ಜನವರಿ 2020, 22:30 IST
   

ನವದೆಹಲಿ: ಭಾರತದ ಚಿನ್ನದ ಆಮದು ಪ್ರಮಾಣವು ಏಪ್ರಿಲ್‌ – ನವೆಂಬರ್‌ ಅವಧಿಯಲ್ಲಿ ಶೇ 7ರಷ್ಟು ಕಡಿಮೆಯಾಗಿದೆ.

ಮೌಲ್ಯದ ಲೆಕ್ಕದಲ್ಲಿ ಆಮದು ಪ್ರಮಾಣವು ₹ 1.43 ಲಕ್ಷ ಕೋಟಿಗಳಷ್ಟಿದೆ ಎಂದು ವಾಣಿಜ್ಯ ಸಚಿವಾಲಯವು ತಿಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಮದು ಪ್ರಮಾಣವು ₹ 1.55 ಲಕ್ಷ ಕೋಟಿಗಳಷ್ಟಿತ್ತು.

ಆಮದು ಕಡಿಮೆಯಾಗಿರುವುದರಿಂದ ದೇಶದ ವ್ಯಾಪಾರ ಕೊರತೆಯು ಎಂಟು ತಿಂಗಳ ಅವಧಿಯಲ್ಲಿ ₹ 7.47 ಲಕ್ಷ ಕೋಟಿಗಳಿಗೆ ಇಳಿಯಲಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು ₹ 9.36 ಲಕ್ಷ ಕೋಟಿಗಳಷ್ಟಿತ್ತು.

ADVERTISEMENT

ಭಾರತವು ಚಿನ್ನ ಆಮದು ಮಾಡಿಕೊಳ್ಳುವ ಅತಿದೊಡ್ಡ ದೇಶವಾಗಿದೆ. ವಾರ್ಷಿಕ 800 ರಿಂದ 900 ಟನ್‌ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಬಹುಪಾಲು, ಚಿನ್ನಾಭರಣಗಳ ತಯಾರಿಕೆಗೆ ಬಳಕೆಯಾಗುತ್ತದೆ.

ವ್ಯಾಪಾರ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಮೇಲಿನ ಪ್ರತಿಕೂಲ ಪರಿಣಾಮ ತಗ್ಗಿಸಲು ಬಜೆಟ್‌ನಲ್ಲಿ ಆಮದು ಸುಂಕವನ್ನು ಶೇ 10 ರಿಂದ ಶೇ 12.5ಕ್ಕೆ ಹೆಚ್ಚಿಸಲಾಗಿತ್ತು. ಹೀಗಾಗಿ, ಜುಲೈನಿಂದ ಚಿನ್ನದ ಆಮದು ಕಡಿಮೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.