ADVERTISEMENT

ಚಿನ್ನ, ಬೆಳ್ಳಿ ದರ ಏರಿಕೆ

ಪಿಟಿಐ
Published 15 ಏಪ್ರಿಲ್ 2024, 15:31 IST
Last Updated 15 ಏಪ್ರಿಲ್ 2024, 15:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ/ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆ ₹74,920ರಂತೆ ಮಾರಾಟವಾಗಿದೆ. ಕೆ.ಜಿ ಬೆಳ್ಳಿ ಧಾರಣೆ ₹85,200ಕ್ಕೆ ಮುಟ್ಟಿದೆ.

ನವದೆಹಲಿಯಲ್ಲೂ ಏರಿಕೆ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು 10 ಗ್ರಾಂ.ಗೆ ₹300 ಹೆಚ್ಚಳವಾಗಿ 73,050ರಂತೆ ಮಾರಾಟವಾಗಿದೆ. ಬೆಳ್ಳಿಯು ಕೆ.ಜಿಗೆ ₹500 ಏರಿಕೆಯಾಗಿ ₹85,700ಕ್ಕೆ ಮುಟ್ಟಿದೆ.

ADVERTISEMENT

‘ಇರಾನ್‌–ಇಸ್ರೇಲ್‌ ಸಂಘರ್ಷದಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಗಮನಹರಿಸಿದ್ದಾರೆ. ಹಾಗಾಗಿ, ಬಂಗಾರದ ಬೆಲೆಯು ಏರಿಕೆ ಆಗುತ್ತಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸೌಮಿಲ್‌ ಗಾಂಧಿ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,355 ಡಾಲರ್‌ (ಅಂದಾಜು ₹1.96 ಲಕ್ಷ) ಮತ್ತು 28.95 (ಅಂದಾಜು ₹2,357) ಡಾಲರ್‌ನಂತೆ ಮಾರಾಟವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.