ನವದೆಹಲಿ: ಚಿನ್ನದ ಉಳಿತಾಯ ನಿಧಿಗಳು ಮತ್ತು ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಏಪ್ರಿಲ್ ತಿಂಗಳಿನಲ್ಲಿ ಒಟ್ಟಾರೆ ₹ 864 ಕೋಟಿ ಬಂಡವಾಳ ಹೂಡಿಕೆ ಆಗಿದೆ. ಕೋವಿಡ್–19 ಸಾಂಕ್ರಾಮಿಕದ ಎರಡನೇ ಅಲೆಯು ಆರ್ಥಿಕ ಬೆಳವಣಿಗೆಯಲ್ಲಿ ಅನಿಶ್ಚಿತ ಸ್ಥಿತಿ ಸೃಷ್ಟಿಸಿದ್ದರೂ ಈ ಪ್ರಮಾಣದಲ್ಲಿ ಹೂಡಿಕೆ ಆಗಿದೆ.
ಏಪ್ರಿಲ್‌ನಲ್ಲಿ ಚಿನ್ನದ ಉಳಿತಾಯ ನಿಧಿಗಳಲ್ಲಿ ₹ 184 ಕೋಟಿ ಮತ್ತು ಚಿನ್ನದ ಇಟಿಎಫ್‌ನಲ್ಲಿ ₹ 680 ಕೋಟಿ ಹೂಡಿಕೆ ಆಗಿದೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾ ಮಾಹಿತಿ ನೀಡಿದೆ.
ಅನಿಶ್ಚಿತ ಸಂದರ್ಭಗಳಲ್ಲಿ ಚಿನ್ನವು ಹೂಡಿಕೆದಾರರ ಪ್ರಮುಖ ಆಯ್ಕೆಯಾಗಿ ಇರಲಿದೆ. ಹೀಗಾಗಿ 2021–22ನೇ ಹಣಕಾಸು ವರ್ಷದಲ್ಲಿ ಸಕಾರಾತ್ಮಕ ಹೂಡಿಕೆಯು ಮುಂದುವರಿಯುವ ನಿರೀಕ್ಷೆ ಮಾಡಲಾಗಿದೆ ಎಂದು ಕ್ವಾಂಟಮ್ ಮ್ಯೂಚುವಲ್ ಫಂಡ್‌ನ ಹಿರಿಯ ನಿಧಿ ನಿರ್ವಾಹಕ ಚಿರಾಗ್ ಮೆಹ್ತಾ ತಿಳಿಸಿದ್ದಾರೆ.
2020–21ರಲ್ಲಿ ಚಿನ್ನದ ನಿಧಿಗಳಲ್ಲಿ ಒಟ್ಟಾರೆ ₹ 3,200 ಕೋಟಿ ಹೂಡಿಕೆ ಆಗಿದೆ. ಚಿನ್ನದ ಇಟಿಎಫ್‌ಗಳಲ್ಲಿ ₹ 6,900 ಕೋಟಿ ಹೂಡಿಕೆ ಆಗಿದೆ.
ಈ ನಿಧಿಗಳು ಕಳೆದ ಮೂರು ವರ್ಷಗಳಲ್ಲಿ ವಾರ್ಷಿಕ ಸರಾಸರಿ ಶೇಕಡ 12ರಿಂದ ಶೇ 14ರಷ್ಟು ಲಾಭ ತಂದುಕೊಟ್ಟಿವೆ. ಐದು ವರ್ಷಗಳಲ್ಲಿ ಶೇ 8ಕ್ಕೂ ಹೆಚ್ಚಿನ ಲಾಭ ತಂದುಕೊಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.