ADVERTISEMENT

Union Budget 2026: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 5:19 IST
Last Updated 1 ಫೆಬ್ರುವರಿ 2026, 5:19 IST
<div class="paragraphs"><p>Gold, Silver Rates</p></div>

Gold, Silver Rates

   

ನವದೆಹಲಿ: ಭಾನುವಾರ ಅಂತರರಾಷ್ಟ್ರೀಯ ಬಹು ಸರಕು ವಿನಿಮಯದಲ್ಲಿ(ಎಂಸಿಎಕ್ಸ್) ಚಿನ್ನ ಮತ್ತು ಬೆಳ್ಳಿ ಬೆಲೆಗಳು ತಲಾ ಶೇ 9 ರಷ್ಟು ಕುಸಿದಿವೆ. ಹೀಗಾಗಿ, ಶುಕ್ರವಾರವೂ ಸೇರಿ ಇದು ಎರಡು ದಿನಗಳಲ್ಲಿ ಆದ ಅತ್ಯಂತ ದೊಡ್ಡ ಕುಸಿತವಾಗಿದೆ ಇದು ಅಂತರರಾಷ್ಟ್ರೀಯ ಆನ್‌ಲೈನ್ ಚಿನ್ನದ ವಹಿವಾಟಿಗೆ ಸಂಬಂಧಿಸಿದ್ದಾಗಿದೆ.

ಆಮದು ಸುಂಕದಲ್ಲಿ ಪರಿಷ್ಕರಣೆ ಕುರಿತಾದ ಬಜೆಟ್ ದಿನದ ಊಹಾಪೋಹದ ಹಿನ್ನೆಲೆಯಲ್ಲಿ ಈ ಕುಸಿತ ಕಂಡುಬಂದಿದೆ. ಕುಸಿತವು ಹೊಸ ಖರೀದಿಗೆ ದಾರಿ ಮಾಡಿಕೊಡುತ್ತದೆಯೋ ಅಥವಾ ಭಾರತದ ಆಭರಣ ವ್ಯಾಪಾರಕ್ಕೆ ದೊಡ್ಡ ಹೊಡೆತವೋ ಎಂಬ ಗೊಂದಲದಕ್ಕೆ ವ್ಯಾಪಾರಿಗಳನ್ನು ದೂಡಿದೆ.

ADVERTISEMENT

ಎಂಸಿಎಕ್ಸ್‌ನಲ್ಲಿ ಚಿನ್ನವು ಪ್ರತಿ 10 ಗ್ರಾಂಗೆ ₹13,711.ಗಳಷ್ಟು ಕುಸಿದು ₹1,38,634ಕ್ಕೆ ತಲುಪಿದೆ.

ಬೆಳ್ಳಿ ಬೆಲೆಯು ಪ್ರತಿ ಕೆ.ಜಿಗೆ ₹26,273ಗಳಷ್ಟು ಕುಸಿದು ₹2,65,652ಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಶೇ 6ರಷ್ಟು ಕುಸಿದಿದ್ದ ಬೆಳ್ಳಿ ಬೆಲೆ ಬಳಿಕ 9ರಷ್ಟು ಕುಸಿತ ದಾಖಲಿಸಿತು.

ಬೆಳ್ಳಿ ಶುಕ್ರವಾರದ ದಿನದ ವಹಿವಾಟಿನಲ್ಲಿ ಶೇ 37ರಷ್ಟು ಕುಸಿದಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ 12ರಷ್ಟು ಕುಸಿದಿತ್ತು. ಶುಕ್ರವಾರದ ಚಿನ್ನದ ಬೆಲೆ ಕುಸಿತವು ಹತ್ತೊಂಬತ್ತರ ದಶಕದ ಆರಂಭದ ನಂತರದ ಅತಿದೊಡ್ಡ ಏಕ ದಿನದ ಕುಸಿತವಾಗಿತ್ತು ಮತ್ತು ಬೆಳ್ಳಿಯ ಕುಸಿತವು ಇದುವರೆಗೆ ಅತಿ ಹೆಚ್ಚಿನ ಕುಸಿತವಾಗಿದೆ.

ವಾರಾಂತ್ಯದಲ್ಲಿ ಶನಿವಾರ ಷೇರುಪೇಟೆ ಮುಚ್ಚಿದ್ದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯ ಕುಸಿತಕ್ಕೆ ತಾತ್ಕಾಲಿಕ ವಿರಾಮ ಬಿದ್ದಿತ್ತು. ಇಂದು ಮಾರುಕಟ್ಟೆ ಆರಂಭದಿಂದಲೇ ಕುಸಿತ ಕಂಡುಬಂದಿದೆ. ವಿನಿಮಯ ಪೇಟೆಯ ಚಂಚಲತೆಯು ಮಾರುಕಟ್ಟೆಯಾದ್ಯಂತ ಹರಡುತ್ತಿದ್ದಂತೆ ಎಂಸಿಎಕ್ಸ್ ಷೇರುಗಳು ಶೇ 9ರಷ್ಟು ಕುಸಿದವು.

ಈ ಕುಸಿತವು ಬಜೆಟ್‌ನತ್ತ ಗಮನವನ್ನು ತೀವ್ರಗೊಳಿಸಿದೆ. ಚಿನ್ನದ ವ್ಯಾಪಾರಿಗಳು ಆಮದು ಸುಂಕದ ಮೇಲಿನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಬೆಲೆ ಮೇಲೆ ಪ್ರಸ್ತುತ ಸುಮಾರು ಶೇ 6 ಮೂಲ ಬಕಾರಿ ಸುಂಕ ಮತ್ತು ಶೇ 3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದು ಒಟ್ಟು ಹೊರೆಯನ್ನು ಸರಿಸುಮಾರು ಶೇ 9ಕ್ಕೆ ಹೆಚ್ಚಿಸಿದೆ. ಈ ಹಿಂದೆ ಇದು ಶೇ 15ರಷ್ಟಿತ್ತು. ಕಳ್ಳಸಾಗಣೆದಾರರ ಹಾವಳಿ ಹೆಚ್ಚಾಗಿತ್ತು. ಬಳಿಕ, ಅದನ್ನು ಶೇ 9ಕ್ಕೆ ಇಳಿಸಲಾಗಿತ್ತು. ಇಂದಿನ ಬಜೆಟ್‌ನಲ್ಲಿ ಸುಂಕವನ್ನು ಶೇ 6ರಿಂದ 4ಕ್ಕೆ ಇಳಿಸಬಹುದೆಂಬ ಊಹಾಪೋಹಗಳಿವೆ.

ಹಾಗೇನಾದರೂ ಆದಲ್ಲಿ ಜಾಗತಿಕ ಮಾರುಕಟ್ಟೆ ಸ್ಥಿರವಾಗಿದ್ದರೆ, ದೇಶೀಯ ಚಿನ್ನದ ಬೆಲೆಗಳಲ್ಲಿ 10 ಗ್ರಾಂಗೆ 2 ಸಾವಿರ ರೂಪಾಯಿಗಳಷ್ಟು ಮತ್ತು ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆ.ಜಿಗೆ ಸುಮಾರು 6 ಸಾವಿರ ರೂಪಾಯಿಗಳಷ್ಟು ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.