ADVERTISEMENT

Gold Silver Rate: ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಪಿಟಿಐ
Published 22 ಜನವರಿ 2026, 16:27 IST
Last Updated 22 ಜನವರಿ 2026, 16:27 IST
   

ನವದೆಹಲಿ: ಬೆಳ್ಳಿ ಹಾಗೂ ಚಿನ್ನದ ದರವು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಕೆಳಕ್ಕೆ ಬಂದಿವೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನದ (ಶೇ 99.9ರಷ್ಟು ಪರಿಶುದ್ಧ) ಬೆಲೆಯು 10 ಗ್ರಾಂಗೆ ₹2,500ರಷ್ಟು ಕಡಿಮೆ ಆಗಿದೆ.

ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಅಮೂಲ್ಯ ಲೋಹಗಳನ್ನು ಮಾರಾಟ ಮಾಡಿದ್ದಾರೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಹೇಳಿದೆ.

ಸತತ ಒಂಬತ್ತು ದಿನಗಳಿಂದ ಏರಿಕೆ ಕಾಣುತ್ತಿದ್ದ ಬೆಳ್ಳಿಯ ಬೆಲೆಯು ಗುರುವಾರ ಕೆ.ಜಿ.ಗೆ ₹14,300ರಷ್ಟು ಕುಸಿದಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ಬೆಲೆಯು ₹3.20 ಲಕ್ಷ ಆಗಿದೆ.

ADVERTISEMENT

‘ಯುರೋಪಿನ ದೇಶಗಳ ಮೇಲೆ ಸುಂಕ ಹೇರುವ ಬೆದರಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹಿಂಪಡೆದರು. ಗ್ರೀನ್‌ಲ್ಯಾಂಡ್‌ ಕುರಿತಾಗಿ ಮುಂದಿನ ಹೆಜ್ಜೆ ಇರಿಸಲು ಚೌಕಟ್ಟೊಂದನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಇದಾದ ನಂತರದಲ್ಲಿ ಚಿನ್ನ, ಬೆಳ್ಳಿಯ ಬೆಲೆಯು ಇಳಿಕೆ ಕಂಡಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟಿಸ್‌ನ ಸರಕುಗಳ ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.