ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ, ಬೆಳ್ಳಿ ದರ ಇಳಿಕೆ ಆಗಿದೆ.
10 ಗ್ರಾಂ ಚಿನ್ನದ ದರ ₹ 480ರಷ್ಟು ಇಳಿಕೆ ಕಂಡಿದ್ದು ₹ 58,770ಕ್ಕೆ ತಲುಪಿದೆ. ಬೆಳ್ಳಿ ಧಾರಣೆ ಕೆ.ಜಿ.ಗೆ ₹ 345ರಷ್ಟು ಇಳಿಕೆ ಕಂಡು ₹ 68,850 ರಂತೆ ಮಾರಾಟವಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು ಇಳಿಕೆ ಆಗಿರುವುದಕ್ಕೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.