ADVERTISEMENT

ಭಾರತದಲ್ಲಿ ಕೃತಕ ಬುದ್ಧಿಮತ್ತೆ ಪ್ರಯಾಣ ಅಸಾಧಾರವಾಗಿರಲಿದೆ: ಸುಂದರ್ ಪಿಚೈ

ಪಿಟಿಐ
Published 18 ಫೆಬ್ರುವರಿ 2026, 15:05 IST
Last Updated 18 ಫೆಬ್ರುವರಿ 2026, 15:05 IST
<div class="paragraphs"><p>ಸುಂದರ್ ಪಿಚೈ, ಗೂಗಲ್ ಸಿಇಓ</p></div>

ಸುಂದರ್ ಪಿಚೈ, ಗೂಗಲ್ ಸಿಇಓ

   

ನವದೆಹಲಿ: ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಪ್ರಯಾಣವು ಅಸಾಧಾರವಾಗಿರಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ‘ನಮ್ಮ ಜೀವಮಾನದಲ್ಲಿ ಅತಿದೊಡ್ಡ ಸ್ಥಿತ್ಯಂತರಕ್ಕೆ ಎ.ಐ ವೇದಿಕೆಯಾಗುತ್ತಿದೆ’ ಎಂದಿರುವ ಅವರು, ‘ಭಾರತದಂತಹ ದೇಶಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ’ಯಲ್ಲಿ ಪಾಲ್ಗೊಂಡಿರುವ ಅವರು, ಭಾರತ ಮತ್ತು ಅಮೆರಿಕದ ನಡುವೆ ಎ.ಐ. ಸಂಪರ್ಕವನ್ನು ಬಲಪಡಿಸುವ ಸಲುವಾಗಿ ಸಾಗರದ ಆಳದಲ್ಲಿ ಹೊಸ ಕೇಬಲ್ ಜಾಲ ಅಳವಡಿಸುವ ಯೋಜನೆಯನ್ನೂ ಪ್ರಕಟಿಸಿದ್ದಾರೆ.

ಹಾಗೆಯೇ, ಕೋಟ್ಯಂತರ ಸರ್ಕಾರಿ ನೌಕರರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವುದಾಗಿ ಹಾಗೂ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವು ನೀಡುವ ಅಟಲ್‌ ಟಿಂಕರಿಂಗ್ ಲ್ಯಾಬ್‌ಗಳಿಗೆ ಎ.ಐ ಸಹಾಕರವನ್ನೂ ಘೋಷಿಸಿದ್ದಾರೆ.

ಪಿಚೈ ಅವರು, ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.