ADVERTISEMENT

ಡಿಜಿಟಲ್‌ ವಂಚನೆ: 2,500 ಸಾಲದ ಆ್ಯಪ್‌ಗಳಿಗೆ ಗೂಗಲ್‌ ಕೊಕ್

ಪಿಟಿಐ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಗೂಗಲ್‌
ಗೂಗಲ್‌   

ನವದೆಹಲಿ: ಜನರಿಗೆ ಸಾಲದ ಆಮಿಷವೊಡ್ಡಿ ಹಣ ವಂಚಿಸುವ 2,500 ಮೊಬೈಲ್‌ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಸರ್ಕಾರವು, ಸೋಮವಾರ ಲೋಕಸಭೆಗೆ ತಿಳಿಸಿದೆ.

2021ರ ಏಪ್ರಿಲ್‌ನಿಂದ 2022ರ ಜುಲೈವರೆಗೆ ನಡೆಸಿದ ಪರಿಶೀಲನೆಯಲ್ಲಿ ಡಿಜಿಟಲ್‌ ವಂಚನೆಯಲ್ಲಿ ತೊಡಗಿದ್ದ ಇಷ್ಟು ಸಂಖ್ಯೆಯ ಆ್ಯಪ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಸಾಲ ನೀಡುವ ಹೆಸರಿನಲ್ಲಿ ಪ್ಲೇ ಸ್ಟೋರ್‌ನಲ್ಲಿದ್ದ 3,500ರಿಂದ 4,000 ಆ್ಯಪ್‌ಗಳನ್ನು ಗೂಗಲ್‌ ಪರಿಶೀಲನೆ ನಡೆಸಿದೆ. ಬಳಿಕ ವಂಚನೆಯ ಆ್ಯಪ್‌ಗಳ ವಿರುದ್ಧ ಕ್ರಮವಹಿಸಿದೆ ಎಂದು ಹೇಳಿದ್ದಾರೆ.‌

ADVERTISEMENT

ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಗೂ ಮಧ್ಯಸ್ಥಿಕೆದಾರರ ಮನವಿ ಮೇರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರವು ವಂಚನೆ ಆ್ಯಪ್‌ಗಳ ವಿರುದ್ಧ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.