ADVERTISEMENT

₹ 84,023 ಕೋಟಿ ತೆರಿಗೆಯೇತರ ವರಮಾನ ಸಂಗ್ರಹ

ಪಿಟಿಐ
Published 20 ಸೆಪ್ಟೆಂಬರ್ 2020, 13:43 IST
Last Updated 20 ಸೆಪ್ಟೆಂಬರ್ 2020, 13:43 IST
ತೆರಿಗೆ ಸಂಗ್ರಹ– ಪ್ರಾತಿನಿಧಿಕ ಚಿತ್ರ
ತೆರಿಗೆ ಸಂಗ್ರಹ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಇಲ್ಲಿಯವರೆಗೆ ₹ 84,023 ಕೋಟಿ ತೆರಿಗೆಯೇತರ ವರಮಾನ ಸಂಗ್ರಹಿಸಿದೆ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ತಿಳಿಸಿದ್ದಾರೆ.

ಈ ಕುರಿತು ರಾಜ್ಯಸಭೆಗೆ ಲಿಖಿತ ರೂಪದ ಉತ್ತರ ನೀಡಿದ್ದಾರೆ. ಒಟ್ಟಾರೆ ಕಾರ್ಪೊರೇಟ್‌ ತೆರಿಗೆ ಸಂಗ್ರಹ ₹ 95,533 ಕೊಟಿ ಆಗಿದ್ದು, ಒಟ್ಟಾರೆ ಜಿಎಸ್‌ಟಿ ಸಂಗ್ರಹ ₹ 3.59 ಲಕ್ಷ ಕೋಟಿಗಳಷ್ಟಾಗಿದೆ.

‘ಮಾರುಕಟ್ಟೆಯಿಂದ ಸಂಗ್ರಹಿಸಿರುವ ಮೊತ್ತವು ₹ 7.06 ಲಕ್ಷ ಕೋಟಿಗಳಷ್ಟಾಗಿದೆ. 2020ರ ಜುಲೈ 31ರವರೆಗೆ ಒಟ್ಟಾರೆ ವೆಚ್ಚವು ₹ 10.54 ಲಕ್ಷ ಕೋಟಿಗಳಷ್ಟಾಗಿದೆ’ ಎಂದು ಅವರು ತಿಳಿಸಿದ್ದಾರೆ. ಜುಲೈ 31ರ ಅಂತ್ಯದವರೆಗೆ ಒಟ್ಟಾರೆ ಬಂಡವಾಳ ವೆಚ್ಚವು ₹ 1.11 ಲಕ್ಷ ಕೋಟಿಗಳಷ್ಟಾಗಿದೆ.

ADVERTISEMENT

ವಿವಾದ್‌ ಸೆ ವಿಶ್ವಾಸ್ ಯೋಜನೆಯಡಿ ₹ 9,538 ಕೋಟಿ ಸಂಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.