ADVERTISEMENT

ರಫ್ತು ಹೆಚ್ಚಿಸಲು ಚಿನ್ನಾಭರಣ ಉದ್ಯಮದ ಸಲಹೆ ಕೇಳಿದ ಸರ್ಕಾರ

ಪಿಟಿಐ
Published 14 ಜೂನ್ 2020, 15:08 IST
Last Updated 14 ಜೂನ್ 2020, 15:08 IST
ಚಿನ್ನಾಭರಣ ತಯಾರಿಕಾ ಉದ್ದಿಮೆ
ಚಿನ್ನಾಭರಣ ತಯಾರಿಕಾ ಉದ್ದಿಮೆ    

ನವದೆಹಲಿ: ಇ–ಕಾಮರ್ಸ್‌ ವ್ಯವಸ್ಥೆಯ ಮೂಲಕ ತಯಾರಿಕೆ ಮತ್ತು ರಫ್ತು ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರವು ಹರಳು ಮತ್ತು ಚಿನ್ನಾಭರಣ ಉದ್ಯಮದ ಸಲಹೆ ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಹರಳು ಮತ್ತು ಚಿನ್ನಾಭರಣ ಉದ್ಯಮಕ್ಕೆ ಕಡಿಮೆ ಬಡ್ಡಿದರದ ಸಾಲ ಯೋಜನೆ ಮುಂದುವರಿಸುವಂತೆ ಹಾಗೂ ವಿದೇಶಿ ಗಣಿ ಕಂಪನಿಗಳಿಗೆ ಕಚ್ಚಾ ವಜ್ರ ಮಾರಾಟ ಮಾಡುವ ಅಥವಾ ಹರಾಜು ಹಾಕುವ ಅನುಮತಿ ನೀಡುವಂತೆ ಉದ್ಯಮವು ಸರ್ಕಾರವನ್ನು ಕೋರಿದೆ.

ದೇಶದ ತಯಾರಿಕಾ ವಲಯದ ಸಾಮರ್ಥ್ಯ ವೃದ್ಧಿಸುವಲ್ಲಿ ಚರ್ಮೋದ್ಯಮ, ಹರಳು, ಚಿನ್ನಾಭರಣ, ನವೀಕರಿಸಬಲ್ಲ ಇಂಧನ, ಔಷಧ ಮತ್ತು ಜವಳಿ ವಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ADVERTISEMENT

ರಫ್ತು ವಹಿವಾಟು

₹2.51 ಲಕ್ಷ ಕೋಟಿ: 2019–20
₹2.75 ಲಕ್ಷ ಕೋಟಿ: 2018–19

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.