ADVERTISEMENT

₹ 80ಕ್ಕೆ ಟೊಮೆಟೊ ಮಾರಾಟ ಆರಂಭಿಸಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 11:01 IST
Last Updated 16 ಜುಲೈ 2023, 11:01 IST
ಟೊಮೆಟೊ
ಟೊಮೆಟೊ   

ನವದೆಹಲಿ: ಕೇಂದ್ರ ಸರ್ಕಾರವು ಭಾನುವಾರದಿಂದ ಕೆ.ಜಿ.ಗೆ ₹80ರಂತೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಆರಂಭಿಸಿದೆ.

ಕೇಂದ್ರವು ದೆಹಲಿ–ಎನ್‌ಸಿಆರ್‌ ಪ್ರದೇಶದಲ್ಲಿ ಕೆ.ಜಿ.ಗೆ ₹90ರಂತೆ ರಿಯಾಯಿತಿ ದರದಲ್ಲಿ ಮೊಬೈಲ್‌ ವ್ಯಾನ್‌ಗಳ ಮೂಲಕ ಶುಕ್ರವಾರದಿಂದ ಟೊಮೆಟೊ ಮಾರಾಟ ಆರಂಭಿಸಿತ್ತು. ಶನಿವಾರ ಇನ್ನೂ ಹಲವು ನಗರಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಆರಂಭಿಸಲಾಗಿದೆ.

ದೇಶದ 500ಕ್ಕೂ ಅಧಿಕ ಕಡೆಗಳಲ್ಲಿ ಪರಿಸ್ಥಿತಿಯ ಮರುಪರಿಶೀಲನೆ ನಡೆಸಿದ ಬಳಿಕ ರಿಯಾಯಿತಿ ದರವನ್ನು ₹80ಕ್ಕೆ ಇಳಿಸಲು ನಿರ್ಧರಿಸಲಾಯಿತು ಎಂದು ಕೇಂದ್ರ ಹೇಳಿದೆ.

ADVERTISEMENT

ನಾಫೆಡ್‌ ಮತ್ತು ಎನ್‌ಸಿಸಿಎಫ್ ಮೂಲಕ ಭಾನುವಾರ ದೆಹಲಿ, ನೊಯಿಡಾ, ಲಖನೌ, ಕಾನ್ಪುರ, ವಾರಾಣಸಿ, ಪಟ್ನಾ, ಮುಜಫರ್‌ನಗರ ಮತ್ತು ಆರಾ ನಗರಗಳಲ್ಲಿ ಟೊಮೆಟೊ ಮಾರಾಟ ಆರಂಭಿಸಲಾಗಿದೆ. ವಿವಿಧ ಮಾರುಕಟ್ಟೆಗಳಲ್ಲಿ ಇರುವ ದರವನ್ನು ಪರಿಗಣಿಸಿ ಸೋಮವಾರದಿಂದ ಇನ್ನೂ ಹಲವು ಕಡೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಕೇಂದ್ರವು ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಆರಂಭಿಸಿದ ಬಳಿಕ ಹಲವು ಪ್ರದೇಶಗಳಲ್ಲಿ ಸಗಟು ದರದಲ್ಲಿ ಇಳಿಕೆ ಕಂಡುಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಕೋಲಾರ, ಆಂಧ್ರಪ್ರದೇಶದ ಮದನಪಲ್ಲಿ ಮತ್ತು ಮಹಾರಾಷ್ಟ್ರದ ಸಂಗನೇರಿಯಿಂದ ಟೊಮೆಟೊ ಖರೀದಿಸಲಾಗುತ್ತಿದೆ ಎಂದು ಎನ್‌ಸಿಸಿಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಆ್ಯನ್ಸಿ ಜೋಸೆಫ್‌ ಚಂದ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.