ADVERTISEMENT

ಟೋಲ್‌ ಸಂಗ್ರಹಕ್ಕೆ ಜಿಪಿಎಸ್‌ ವ್ಯವಸ್ಥೆ ಜಾರಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಪಿಟಿಐ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
<div class="paragraphs"><p>ದೇವನಹಳ್ಳಿ ಟೋಲ್‌ ಪ್ಲಾಜಾ –ಸಂಗ್ರಹ ಚಿತ್ರ</p></div>

ದೇವನಹಳ್ಳಿ ಟೋಲ್‌ ಪ್ಲಾಜಾ –ಸಂಗ್ರಹ ಚಿತ್ರ

   

ನವದೆಹಲಿ: ‘ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಎಲ್ಲಾ ಟೋಲ್‌ ಪ್ಲಾಜಾಗಳಲ್ಲಿ ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಟೋಲ್‌ ಸಂಗ್ರಹಕ್ಕೆ ಉಪಗ್ರಹ ಆಧಾರಿತ ಜಿಪಿಎಸ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಇಲ್ಲಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟೋಲ್‌ಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸುವುದು ಇದರ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ADVERTISEMENT

ಈಗಿರುವ ಟೋಲ್‌ ಪ್ಲಾಜಾಗಳ ಬದಲಾಗಿ ಜಿಪಿಎಸ್‌ ಆಧಾರಿತ ಟೋಲ್‌ ವ್ಯವಸ್ಥೆ ರೂಪಿಸಲಾಗುವುದು ಎಂದರು.

2018–19ರಲ್ಲಿ ಟೋಲ್‌ಗಳಲ್ಲಿ ವಾಹನಗಳ ಕಾಯುವಿಕೆ ಅವಧಿಯ 8 ನಿಮಿಷ ಇತ್ತು. 2020–21 ಮತ್ತು 2021–22ರಲ್ಲಿ ಫಾಸ್ಟ್ಯಾಗ್‌ ಅನುಷ್ಠಾನಗೊಂಡ ಬಳಿಕ ಈ ಅವಧಿಯು 47 ಸೆಕೆಂಡ್‌ಗಳಿಗೆ ಇಳಿಕೆಯಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.