ADVERTISEMENT

ಜಿಎಸ್‌ಟಿ ದರ ಇಳಿಕೆ: ನಿಸಾನ್, ಕಿಯಾ, ಔಡಿ ಕಾರು ಬೆಲೆ ಇಳಿಕೆ

ಪಿಟಿಐ
Published 8 ಸೆಪ್ಟೆಂಬರ್ 2025, 15:20 IST
Last Updated 8 ಸೆಪ್ಟೆಂಬರ್ 2025, 15:20 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

(ಪಿಟಿಐ ಚಿತ್ರ)

ನವದೆಹಲಿ: ವಾಹನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ತನ್ನ ಜನಪ್ರಿಯ ಮ್ಯಾಗ್ನೈಟ್‌ ಎಸ್‌ಯವಿ ಮಾದರಿಯ ಬೆಲೆಯಲ್ಲಿ ₹1 ಲಕ್ಷದವರೆಗೆ ಇಳಿಕೆ ಆಗಲಿದೆ ಎಂದು ನಿಸಾನ್ ಮೋಟರ್ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.

ADVERTISEMENT

ಹೊಸ ದರವು ಜಿಎಸ್‌ಟಿ ಪರಿಷ್ಕೃತ ದರ ಜಾರಿಗೆ ಬರಲಿರುವ ಸೆಪ್ಟೆಂಬರ್‌ 22ರಿಂದ ಅನ್ವಯವಾಗಲಿದೆ. ಆದರೆ, ಹೊಸ ದರಕ್ಕೆ ಕಾರು ಬುಕ್ ಮಾಡಲು ಈಗಿನಿಂದಲೇ ಅವಕಾಶ ಇದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಔಡಿ ಕಾರು ಬೆಲೆ ಇಳಿಕೆ: ಜಿಎಸ್‌ಟಿ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲಿರುವ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ, ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯು ₹2.6 ಲಕ್ಷದಿಂದ ₹7.8 ಲಕ್ಷದವರೆಗೆ ಇಳಿಯಲಿದೆ ಎಂದು ತಿಳಿಸಿದೆ.

ಕಿಯಾ ಕಂಪನಿಯ ಕಾರುಗಳ ಬೆಲೆಯು ಗರಿಷ್ಠ ₹4.48 ಲಕ್ಷದವರೆಗೆ ಇಳಿಕೆ ಆಗಲಿದೆ. ಕಾರೆನ್ಸ್‌ ಕಾರಿನ ಬೆಲೆಯು ₹48,513ರಷ್ಟು ಹಾಗೂ ಕಾರ್ನಿವಲ್ ಕಾರಿನ ಬೆಲೆಯು ₹4.48 ಲಕ್ಷದವರೆಗೆ ಇಳಿಕೆ ಆಗಲಿದೆ. ಬೆಲೆ ಇಳಿಕೆಯು ಸೆಪ್ಟೆಂಬರ್‌ 22ರಿಂದ ಜಾರಿಗೆ ಬರಲಿದೆ.

ಜೆಎಸ್‌ಡಬ್ಲ್ಯು ಎಂಜಿ ಮೋಟರ್‌ ಇಂಡಿಯಾ ಕಂಪನಿಯು ತನ್ನ ಕಾರುಗಳ ಬೆಲೆಯು ₹54 ಸಾವಿರದಿಂದ ₹3.04 ಲಕ್ಷದವರೆಗೆ ಕಡಿಮೆ ಆಗಲಿದೆ ಎಂದು ಹೇಳಿದೆ. ಇದು ಸೆಪ್ಟೆಂಬರ್‌ 7ರಿಂದಲೇ ಜಾರಿಗೆ ಬಂದಿದೆ.

₹20 ಲಕ್ಷ ಇಳಿಕೆ: ಲೆಕ್ಸಸ್‌ ಇಂಡಿಯಾ ಕಂಪನಿಯ ಕಾರಿನ ಬೆಲೆಯು ₹20.8 ಲಕ್ಷದವರೆಗೆ ಇಳಿಕೆ ಆಗಲಿದೆ. ಪರಿಷ್ಕೃತ ದರವು ಸೆಪ್ಟೆಂಬರ್‌ 22ರಿಂದ ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.