ADVERTISEMENT

5 ವರ್ಷದಲ್ಲಿ GST ಸಂಗ್ರಹ ದುಪ್ಪಟ್ಟು: 2024–25ರಲ್ಲಿ ₹22.08 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 30 ಜೂನ್ 2025, 10:04 IST
Last Updated 30 ಜೂನ್ 2025, 10:04 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ನವದೆಹಲಿ: ಕಳೆದ 5 ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ದುಪ್ಪಟ್ಟಾಗಿದ್ದು. 2024–25ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ತೆರಿಗೆ ಸಂಗ್ರಹ ₹22.08 ಲಕ್ಷ ಕೋಟಿಗೆ ತಲುಪಿದೆ ಎಂದು ಸರ್ಕಾರದ ದತ್ತಾಂಶದಿಂದ ಗೊತ್ತಾಗಿದೆ.

‌ಇದು 2024–25ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹವಾದ ಅತಿ ಹೆಚ್ಚು ತೆರಿಗೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ 9.4ರಷ್ಟು ಏರಿಕೆಯಾಗಿದೆ. 2021ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹ ₹11.37 ಲಕ್ಷ ಕೋಟಿ ಇತ್ತು.

ADVERTISEMENT

2025ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಸರಾಸರಿ ಮಾಸಿಕ ಜಿಎಸ್‌ಟಿ ಸಂಗ್ರಹ ₹1.84 ಲಕ್ಷ ಕೋಟಿ ಇದ್ದರೆ, 2024ರ ಆರ್ಥಿಕ ವರ್ಷದಲ್ಲಿ ₹1.68 ಲಕ್ಷ ಕೋಟಿ, 2022ರ ಆರ್ಥಿಕ ವರ್ಷದಲ್ಲಿ ₹1.51 ಲಕ್ಷ ಕೋಟಿ ಇತ್ತು.

ಜಿಎಸ್‌ಟಿ ಜಾರಿ ಬಂದು 8 ವರ್ಷ ತುಂಬಿದ್ದು, ಒಟ್ಟು ನೋಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆ 65 ಲಕ್ಷದಿಂದ 1.51 ಕೋಟಿಗೆ ಏರಿಕೆಯಾಗಿದೆ.

‘ಜಿಎಸ್‌ಟಿ ಜಾರಿಗೆ ಬಂದ ಬಳಿಕ, ತೆರಿಗೆ ಸಂಗ್ರಹ ಹೆಚ್ಚಳದ ಜೊತೆ ತೆರಿಗೆ ಮೂಲ ವಿಸ್ತರಣೆಯಾಗಿದೆ. ಇದು ಭಾರತದ ಹಣಕಾಸಿನ ಸ್ಥಿತಿಯನ್ನು ಸ್ಥಿರವಾಗಿ ಬಲಪಡಿಸಿದೆ ಮತ್ತು ಪರೋಕ್ಷ ತೆರಿಗೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸಿದೆ’ ಎಂದು ಸರ್ಕಾರ ತಿಳಿಸಿದೆ.

2017ರ ಜುಲೈ 1 ರಂದು ಜಿಎಸ್‌ಟಿ ಜಾರಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.