ADVERTISEMENT

ಜಿಎಸ್‌ಟಿ: ‘ಇ–ಇನ್‌ವಾಯ್ಸ್‌’ ಶೀಘ್ರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 7:52 IST
Last Updated 29 ಏಪ್ರಿಲ್ 2019, 7:52 IST
   

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯಡಿ, ವಹಿವಾಟಿನ ಗರಿಷ್ಠ ಮಿತಿಗಿಂತಲೂ ಹೆಚ್ಚಿನ ಮೊತ್ತದ ಮಾರಾಟಕ್ಕೆ ವಿದ್ಯುನ್ಮಾನ ಬೆಲೆಪಟ್ಟಿ (ಇ–ಇನ್‌ವಾಯ್ಸ್‌) ಪಡೆಯುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ.

ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಜಿಎಸ್‌ಟಿ ಜಾಲತಾಣದಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ರೀತಿ ಸೃಷ್ಟಿಯಾಗುವ ಇ–ಇನ್‌ವಾಯ್ಸ್‌ ಸಂಖ್ಯೆಯನ್ನು ಮಾರಾಟದ ಲೆಕ್ಕಪತ್ರ ಮತ್ತು ತೆರಿಗೆ ಪಾವತಿಸಿದ ಮಾಹಿತಿಗಳೊಂದಿಗೆ ಹೋಲಿಕೆ ಮಾಡಲು ಅನುಕೂಲವಾಗಲಿದೆ.

ADVERTISEMENT

ವಹಿವಾಟಿನ ಗರಿಷ್ಠ ಮಿತಿಯ ಆಚೆ ಸರಕುಗಳ ಮಾರಾಟ ನಡೆಸುವ ಉದ್ಯಮಗಳಿಗೆ ಒಂದು ಸಾಫ್ಟ್‌ವೇರ್‌ ನೀಡಲಾಗುವುದು. ಇ–ಇನ್‌ವಾಯ್ಸ್‌ ಸೃಷ್ಟಿಯಾಗಲು ಅನುಕೂಲ ಆಗುವಂತೆ ಅದು ಜಿಎಸ್‌ಟಿ ಅಥವಾ ಸರ್ಕಾರದ ಜಾಲತಾಣದೊಂದಿಗೆ ಸಂಪರ್ಕಗೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.