ADVERTISEMENT

ಜಿಎಸ್‌ಟಿ ಪರಿಷ್ಕರಣೆ | ಮದರ್ ಡೈರಿ ಉತ್ಪನ್ನಗಳ ದರ ಕಡಿತ: ಇಲ್ಲಿದೆ ಮಾಹಿತಿ

ಪಿಟಿಐ
Published 16 ಸೆಪ್ಟೆಂಬರ್ 2025, 12:56 IST
Last Updated 16 ಸೆಪ್ಟೆಂಬರ್ 2025, 12:56 IST
   

ನವದೆಹಲಿ: ಮದರ್‌ ಡೈರಿ ಜಿಎಸ್‌ಟಿ ಪರಿಷ್ಕರಣೆಯನ್ನು ಶೇ 100ರಷ್ಟು ಅಳವಡಿಸಿಕೊಂಡಿದ್ದು, ಬಹುತೇಕ ಉತ್ಪನ್ನಗಳ ದರ ಕಡಿತವಾಗಲಿದೆ ಎಂದು ಕಂಪನಿ ಹೇಳಿದೆ. 

ಸೆ.22ರಿಂದ ಅನ್ವಯವಾಗುವ ಜಿಎಸ್‌ಟಿ ಹೊಸ ನೀತಿಯಲ್ಲಿ ಹಾಲಿನ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳ ಬೆಲೆ ಇಳಿಕೆಯಾಗಲಿದೆ. 

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಅಡಿಯಲ್ಲಿರುವ ಮದರ್‌ ಡೈರಿಯ ಪನ್ನೀರ್‌ (200ಗ್ರಾಂ) ಬೆಲೆ ₹95 ರಿಂದ ₹92ಕ್ಕೆ ಇಳಿಕೆಯಾಗಲಿದೆ.

ADVERTISEMENT

ರಟ್ಟಿನ ಪ್ಯಾಕ್‌ನಲ್ಲಿನ ತುಪ್ಪದ ಬೆಲೆ (1 ಲೀ.) ₹675 ರಿಂದ ₹645ಕ್ಕೆ ಮತ್ತು ಬೆಣ್ಣೆಯ ಬೆಲೆ (10 ಗ್ರಾಂ) ₹62ರಿಂದ ₹58ಕ್ಕೆ ಇಳಿಕೆಯಾಗಲಿದೆ. 

ಇದೇ ರೀತಿ ಕ್ಯಾಸೆಟ್ಟಾ ಐಸ್‌ ಕ್ರೀಮ್‌, ಉಪ್ಪಿನಕಾಯಿ, ಸಫಲ್ ಫ್ರೋಜಾನ್ ಫ್ರೆಂಚ್‌ ಫ್ರೈಸ್‌ ಸೇರಿ ಹಲವು ಉತ್ಪನ್ನಗಳ ಬೆಲೆಯಲ್ಲಿ ಕಡಿತವಾಗಲಿದೆ ಎಂದು ಕಂಪನಿ ಹೇಳಿದೆ. 

ಜಿಎಸ್‌ಟಿ ಪರಿಷ್ಕರಣೆ, ಡೈರಿ ಮತ್ತು ಸಂಸ್ಕರಿತ ಆಹಾರಗಳ ಮೇಲೆ ಉತ್ತಮ ಪರಿಣಾಮ ಬೀರಲಿದ್ದು, ದರ ಕಡಿತದಿಂದ ಬಳಕೆದಾರರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.