ADVERTISEMENT

ಜಿಎಸ್‌ಟಿ ಬಾಕಿ: ಮಧ್ಯಂತರ ತಡೆಯಾಜ್ಞೆ

ಪಿಟಿಐ
Published 5 ಏಪ್ರಿಲ್ 2025, 14:36 IST
Last Updated 5 ಏಪ್ರಿಲ್ 2025, 14:36 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ಮುಂಬೈ: ಕೇಂದ್ರ ತೆರಿಗೆ ಇಲಾಖೆಯು ಸುಮಾರು ₹2,500 ಕೋಟಿ ಜಿಎಸ್‌ಟಿ ಬಾಕಿಗೆ ಸಂಬಂಧಿಸಿದಂತೆ ಹಿಂದುಸ್ತಾನ್‌ ಕೋಕಾ ಕೋಲಾ ಬೆವರೇಜಸ್ ಕಂಪನಿಗೆ ನೀಡಿದ್ದ ಷೋಕಾಸ್‌ ನೋಟಿಸ್‌ಗೆ, ಬಾಂಬೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಏಳು ಮೌಲ್ಯಮಾಪನ ವರ್ಷಗಳಲ್ಲಿ ಕಂಪನಿಯು ವಿತರಕರಿಗೆ ನೀಡಿರುವ ರಿಯಾಯಿತಿಯಲ್ಲಿ ಲೋಪ ಕಂಡುಬಂದಿದೆ ಎಂದು ಇಲಾಖೆಯು ಜನವರಿಯಲ್ಲಿ ನೋಟಿಸ್‌ ನೀಡಿತ್ತು. ತೆರಿಗೆ ವಂಚಿಸುವ ಉದ್ದೇಶದಿಂದಲೇ ಈ ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿತ್ತು. ನೋಟಿಸ್ ಪ್ರಶ್ನಿಸಿ ಕಂಪನಿಯು ಹೈಕೋರ್ಟ್‌ ಮೆಟ್ಟಿಲೇರಿತ್ತು. 

ADVERTISEMENT

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಬಾವಲ್ಲ ಮತ್ತು ಫಿರ್ದೋಶ್ ಪೂನಿವಾಲಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ಈ ತಡೆಯಾಜ್ಞೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.