ADVERTISEMENT

ಚಿನ್ನಾಭರಣಕ್ಕೆ ಹಾಲ್‌ಮಾರ್ಕ್‌ 2021 ಜನವರಿಯಿಂದ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 20:00 IST
Last Updated 14 ಜನವರಿ 2020, 20:00 IST
ಚಿನ್ನ
ಚಿನ್ನ   

ನವದೆಹಲಿ:2021ರ ಜನವರಿ 15ರಿಂದ ಹಾಲ್‌ಮಾರ್ಕ್‌ ಇರುವ 14,18,22 ಕ್ಯಾರಟ್‌ನ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಚಿನ್ನಾಭರಣಗಳ ಶುದ್ಧತೆ ಬಗ್ಗೆ ಚಿಂತಿತರಾದವರಿಗೆ ಇದು ನೆಮ್ಮದಿ ತರುವ ಸಂಗತಿಯಾಗಿದೆ. ಗ್ರಾಹಕರಿಗೆ ತಾವು ಖರೀದಿಸುವ ಚಿನ್ನಾಭರಣಗಳ ಶುದ್ಧತೆಯ ಪ್ರಮಾಣವು ಹಾಲ್‌ಮಾರ್ಕ್‌ನಿಂದ ಖಚಿತವಾಗಲಿದೆ.

‘ಈ ನಿಬಂಧನೆ ಉಲ್ಲಂಘಿಸುವವರು ದಂಡ ಪಾವತಿಸುವುದರ ಜತೆಗೆ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕುರಿತು ಗುರುವಾರ ಅಧಿಸೂಚನೆ ಹೊರಡಿಸಲಾಗುವುದು’ ಎಂದುಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಮಂಗಳವಾರ ಇಲ್ಲಿ ತಿಳಿಸಿದ್ದಾರೆ.

ADVERTISEMENT

‘ಎಲ್ಲಾ ಚಿನ್ನಾಭರಣ ವರ್ತಕರುಭಾರತೀಯ ಮಾನದಂಡ ಮಂಡಳಿಯಲ್ಲಿ (ಬಿಐಎಸ್‌) ನೋಂದಾಯಿಸಿಕೊಳ್ಳಬೇಕು.ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳನ್ನು ಮಾತ್ರವೇ ಮಾರಾಟ ಮಾಡಬೇಕು’ ಎಂದು ಹೇಳಿದ್ದಾರೆ.

2000ದಿಂದಲೂಹಾಲ್‌ಮಾರ್ಕ್‌ ಬಳಕೆ ಆರಂಭವಾಗಿದೆ. ಸದ್ಯ ಬಳಕೆಯಲ್ಲಿರುವ ಚಿನ್ನಾಭರಣಗಳಲ್ಲಿ ಶೇ 40ರಷ್ಟುಹಾಲ್‌ಮಾರ್ಕ್‌ ಒಳಗೊಂಡಿವೆ.

ಹಾಲ್‌ಮಾರ್ಕ್‌ ಹಾಕಿದ ಆಭರಣಗಳ ತೂಕ ಎಷ್ಟೇ ಇರಲಿ ಅವುಗಳಿಗೆ ಹೆಚ್ಚುವರಿಯಾಗಿ ₹ 30 ಬೆಲೆ ವಿಧಿಸಬೇಕಾಗುತ್ತದೆ. ಬ್ರ್ಯಾಂಡೆಡ್‌ ಆಭರಣ ಮಾರಾಟಗಾರರು ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವಂತಿಲ್ಲ. ಆದರೆ, ಬ್ರ್ಯಾಂಡೆಡ್‌ರಹಿತ ಸ್ಥಳೀಯ ವರ್ತಕರು ಈ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡಬಹುದು.

‘ಶೇ 100ರಷ್ಟು ಬಿಐಎಸ್‌ ಹಾಲ್‌ಮಾರ್ಕ್‌ ಚಿನ್ನ ಮಾರಾಟದಲ್ಲಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಹಾಲ್‌ಮಾರ್ಕ್‌ ಕಡ್ಡಾಯ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದರಿಂದ ಸಂಘಟಿತ ವಲಯದ ಚಿನ್ನಾಭರಣ ಮಾರಾಟ ಹೆಚ್ಚಲಿದೆ’ ಎಂದು ಕಲ್ಯಾಣ ಜುವೆಲರ್ಸ್‌ನ ಅಧ್ಯಕ್ಷ ಟಿ. ಎಸ್‌. ಕಲ್ಯಾಣರಾಮನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.