ADVERTISEMENT

ಮಾರ್ಚ್‌ 29ರಿಂದ ಮೂರು ದಿನ ಐ.ಟಿ ಕಚೇರಿ ಕಾರ್ಯ ನಿರ್ವಹಣೆ: ಸಿಬಿಡಿಟಿ

ಪಿಟಿಐ
Published 27 ಮಾರ್ಚ್ 2025, 15:53 IST
Last Updated 27 ಮಾರ್ಚ್ 2025, 15:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಆರ್ಥಿಕ ವರ್ಷವು ಮಾರ್ಚ್ 31ರಂದು ಮುಕ್ತಾಯವಾಗಲಿದೆ. ಹಾಗಾಗಿ, ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಮಾರ್ಚ್‌ 29ರಿಂದ 31ರ ವರೆಗೆ ದೇಶದಾದ್ಯಂತ ಆದಾಯ ತೆರಿಗೆ ಇಲಾಖೆಯ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಗುರುವಾರ ತಿಳಿಸಿದೆ. 

ಸೋಮವಾರ ಈದ್–ಉಲ್–ಫಿತರ್ ಹಬ್ಬವಿದೆ. ಆದರೂ, ಕಚೇರಿಗಳು ತೆರೆದಿರಲಿವೆ ಎಂದು ತಿಳಿಸಿದೆ.

‌‌ಸರ್ಕಾರದ ಜೊತೆ ವ್ಯವಹರಿಸುವ ಎಲ್ಲ ಬ್ಯಾಂಕ್‌ಗಳು ಮಾರ್ಚ್‌ 31ರಂದು ಕಾರ್ಯ ನಿರ್ವಹಿಸಬೇಕಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ದೇಶನ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.