ADVERTISEMENT

ನೀವು ಒಳ್ಳೆಯವರಾಗಿದ್ದರೆ, ಉತ್ತಮವಾಗಿ ಹಣಕಾಸು ನಿರ್ವಹಣೆ ಮಾಡಲಾರಿರಿ: ಅಧ್ಯಯನ

ಏಜೆನ್ಸೀಸ್
Published 24 ಅಕ್ಟೋಬರ್ 2018, 5:18 IST
Last Updated 24 ಅಕ್ಟೋಬರ್ 2018, 5:18 IST
   

ಬೆಂಗಳೂರು: ನೀವು ಒಳ್ಳೆಯ ವ್ಯಕ್ತಿಯಾಗಿದ್ದರೆ ಹಣಕಾಸು ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಲು ಹೆಣಗಾಡಬೇಕಾದೀತು. ಹೀಗಂತ ಅಧ್ಯಯನದ ವರದಿಯೊಂದು ಹೇಳಿದೆ.

ವ್ಯಕ್ತಿಗತ ಆರ್ಥಿಕ ನಿರ್ವಹಣೆ ಕುರಿತಂತೆ ನಡೆಸಲಾಗಿದ್ದNice Guys Finish Last: When and Why Agreeableness Is Associated With Economic Hardship ಅಧ್ಯಯನದ ವರದಿಯುಯುನಿವರ್ಸಿಟಿ ಕಾಲೇಜ್‌ ಆಫ್‌ಲಂಡನ್‌ನಿನ್ನವ್ಯಕ್ತಿತ್ವ ಮತ್ತು ಸಾಮಾಜಿಕ ಮನೋವಿಜ್ಞಾನ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಅಧ್ಯಯನದ ಪ್ರಕಾರ ಒಳ್ಳೆಯ ವ್ಯಕ್ತಿಗಳು ಹೆಸರನ್ನು ಉಳಿಸಿಕೊಳ್ಳುವ ಸಲುವಾಗಿ ಅಧಿಕ ಹಣವನ್ನು ವ್ಯಯಿಸಲಿದ್ದಾರೆ. ಕಾರಣ ಅವರು ಉತ್ತಮರು ಎಂಬುದು ಮಾತ್ರವಲ್ಲ. ಹಣಕ್ಕಿಂತ ಮಿಗಿಲಾಗಿ ವ್ಯಕ್ತಿಗಳಿಗೆ ಬೆಲೆ ನೀಡುತ್ತಾರೆ ಎಂಬುದು.

ADVERTISEMENT

ಸ್ಯಾಂಡ್ರಾ ಮ್ಯಾಟ್ಜ್‌ ಮತ್ತು ಜಾಯ್‌ ಗ್ಲಾಡ್‌ಸ್ಟೋನ್‌ ಎನ್ನುವವರು ಈ ಅಧ್ಯಯನ ನಡೆಸಿದ್ದರು. ಎರಡು ಆನ್‌ಲೈನ್‌ ವಿಶ್ಲೇಷಣೆ, ರಾಷ್ಟ್ರೀಯ ಸಮೀಕ್ಷೆ, ಬ್ಯಾಂಕ್‌ ಅಕೌಂಟ್‌ ಅಂಕಿ–ಅಂಶಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ಬಳಸಿಕೊಂಡು ಸುಮಾರು 3 ಲಕ್ಷ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

‘ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲಾಗದವರಿಗಾಗಿ ದಯೆ ಹಾಗೂ ನಂಬಿಕಸ್ಥ ವ್ಯಕ್ತಿಗಳು ಹಣ ಖರ್ಚು ಮಾಡುತ್ತಾರೆ’ ಎಂದು ಸಂಶೋದನೆ ಉಲ್ಲೇಖಿಸಿದೆ.

‘ಅಧಿಕ ಸಾಲ, ಕಡಿಮೆ ಉಳಿತಾಯ, ಹೆಚ್ಚು ಖರ್ಚು ಸೇರಿದಂತೆ ಹಲವು ಆರ್ಥಿಕ ಸಂಕಷ್ಟ ಸೂಚಕಗಳನ್ನು ಅಧ್ಯಯನದಿಂದ ಕಂಡುಕೊಂಡಿದ್ದೇವೆ. ಜತೆಗೆ ಉತ್ತಮ ವ್ಯಕ್ತಿಗಳು ಹಣಕಾಸಿನ ವಿಚಾರದಲ್ಲಿ ಕಾಳಜಿ ವಹಿಸದಿರುವುದು ಅಥವಾ ಅಷ್ಟಾಗಿ ಮಹತ್ವ ನೀಡದಿರುವುದು ತಿಳಿದು ಬಂದಿದೆ. ಹಾಗಾಗಿ ಅವರು ಹಣಕಾಸಿನ ತೊಂದರೆಗೊಳಗಾಗುತ್ತಾರೆ’ ಎಂದುಗ್ಲಾಡ್‌ ಸ್ಟೋನ್‌ ಹೇಳಿದ್ದಾರೆ.

‘ಇದರಿಂದಾಗಿ ಸಕಾರಾತ್ಮಕವಾಗಿ ಚಿಂತಿಸುವ ಉತ್ತಮ ವ್ಯಕ್ತಿತ್ವ ಹೊಂದಿರುವವರು ಆರ್ಥಿಕವಾಗಿ ಋಣಾತ್ಮಕ ಪರಿಣಾಮ ಎದುರಿಸುತ್ತಾರೆ’ ಎಂಬುದನ್ನು ಕಂಡುಕೊಂಡಿದ್ದೇವೆ’ ಎಂಬುದಾಗಿಮ್ಯಾಟ್ಜ್‌ ತಿಳಿಸಿದ್ದಾರೆ.

‘ಸಕಾರಾತ್ಮಕ ಮನಸ್ಥಿತಿಯು ಆದಾಯ ಗಳಿಕೆಯ ಮೇಲೆ ಪರಿಣಾಮ ಉಂಟುಮಾಡುತ್ತವೆ ಎಂದಷ್ಟೇ ಹಿಂದಿನ ಅಧ್ಯಯನಗಳಿಂದ ತಿಳಿಯಲಾಗಿತ್ತು. ಇದರ ಸತ್ಯ ತಿಳಿಯುವ ಸಲುವಾಗಿ ಹಾಗೂ ಒಳ್ಳೆಯವರು ಹಣಕಾಸು ಸಂಕಷ್ಟ ಎದುರಿಸಲು ಕಾರಣವೇನು ಎಂಬುದನ್ನು ತಿಳಿಸಯಲು ಅಧ್ಯಯನ ನಡೆಸಿದೆವು’ ಎಂದುಕೊಲಂಬಿಯಾ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಪಿಎಚ್‌ಡಿ ಪಡೆದಿರುವ ಹಾಗೂ ಪ್ರಸ್ತುತಅಧ್ಯಯನ ನಡೆಸುತ್ತಿರುವಸ್ಯಾಂಡ್ರಾ ಹೇಳಿದ್ದಾರೆ.

ಆದಾಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಸಂಶೋಧಕರು, ಸಕಾರಾತ್ಮಕವಾಗಿ ಚಿಂತಿಸುವವರೆಲ್ಲರೂ ಹಣಕಾಸಿನ ಸಮಸ್ಯೆಗೊಳಗಾಗುವುದಿಲ್ಲ. ಆದಾಯದ ಪ್ರಮಾಣ ಹಾಗೂ ಆರ್ಥಿಕ ವ್ಯವಹಾರಗಳ ನಡುವಣ ಸಂಬಂಧ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.