
ನವದೆಹಲಿ: ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಉತ್ಪಾದನೆ ಜನವರಿಯಲ್ಲಿ ಶೇ 4ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ಶುಕ್ರವಾರ ತಿಳಿಸಿವೆ. ಇದು ಎರಡು ತಿಂಗಳ ಕನಿಷ್ಠ ಮಟ್ಟ.
ಕಳೆದ ವರ್ಷದ ಜನವರಿಯಲ್ಲಿ ಮೂಲಸೌಕರ್ಯ ವಲಯಗಳ ಉತ್ಪಾದನೆ ಶೇ 5.1 ಮತ್ತು ಡಿಸೆಂಬರ್‌ನಲ್ಲಿ ಶೇ 4.7ರಷ್ಟು ದಾಖಲಾಗಿತ್ತು. ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲದ ಉತ್ಪಾದನೆಯು ಜನವರಿಯಲ್ಲಿ ಇಳಿಕೆ ಆಗಿದೆ.
ಕಲ್ಲಿದ್ದಲು ಮತ್ತು ಸಿಮೆಂಟ್ ಉತ್ಪಾದನೆಯು ಕ್ರಮವಾಗಿ ಶೇ 3.1 ಮತ್ತು ಶೇ 10.7ರಷ್ಟು ದಾಖಲಾಗಿದೆ. ಕಳೆದ ವರ್ಷದ ಜನವರಿಯಲ್ಲಿ ಇದು ಶೇ 4.6 ಮತ್ತು ಶೇ 14.3ರಷ್ಟಿತ್ತು. ರಸಗೊಬ್ಬರ, ಉಕ್ಕು ಮತ್ತು ವಿದ್ಯುತ್ ಉತ್ಪಾದನೆಯು ಸಕಾರಾತ್ಮಕ ಬೆಳವಣಿಗೆ ಕಂಡಿದೆ ಎಂದು ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್–ಜನವರಿವರೆಗೆ ಈ ವಲಯಗಳ ಉತ್ಪಾದನೆ ಶೇ 2.8ರಷ್ಟು ದಾಖಲಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಇದು ಶೇ 4.5ರಷ್ಟಿತ್ತು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.