ADVERTISEMENT

ಭಾರತವು ‘ಮಹಾಶಕ್ತಿ’ಯಾಗುವ ಸಾಧ್ಯತೆ ಇದೆ: ಆರ್ಥಿಕ ವಿಶ್ಲೇಷಕ ಮಾರ್ಟಿನ್ ವೂಲ್ಫ್

ಪಿಟಿಐ
Published 20 ಜುಲೈ 2023, 14:27 IST
Last Updated 20 ಜುಲೈ 2023, 14:27 IST
ಆರ್ಥಿಕತೆ ಚೇತರಿಕೆ– ಪ್ರಾತಿನಿಧಿಕ ಚಿತ್ರ
ಆರ್ಥಿಕತೆ ಚೇತರಿಕೆ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತವು ಬೆಳೆಯುತ್ತಿರುವ ‘ಮಹಾಶಕ್ತಿ’ಯಾಗುವ ಸಾಧ್ಯತೆಯು ನಿಜಕ್ಕೂ ಇದೆ, 2050ರ ಸುಮಾರಿಗೆ ಭಾರತದ ಅರ್ಥ ವ್ಯವಸ್ಥೆಯ ಗಾತ್ರವು ಅಮೆರಿಕದ ಅರ್ಥ ವ್ಯವಸ್ಥೆಯ ಗಾತ್ರದ ಸರಿಸಮಕ್ಕೆ ಬಂದಿರುತ್ತದೆ ಎಂದು ಆರ್ಥಿಕ ವಿಶ್ಲೇಷಕ ಮಾರ್ಟಿನ್ ವೂಲ್ಫ್‌ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ತಲಾವಾರು ಜಿಡಿಪಿ ಬೆಳವಣಿಗೆಯು 2050ರವರೆಗೆ ಶೇಕಡ 5ರ ಮಟ್ಟದಲ್ಲಿ ಇರಲಿದೆ. ಒಳ್ಳೆಯ ಆಡಳಿತಾತ್ಮಕ ನೀತಿಗಳ ಕಾರಣದಿಂದಾಗಿ ಬೆಳವಣಿಗೆಯು ಇನ್ನೂ ಹೆಚ್ಚಿನ ಮಟ್ಟ ತಲುಪಬಹುದು. ಹಾಗೆಯೇ, ಅದು ಕಡಿಮೆ ಆಗುವ ಸಾಧ್ಯತೆಯೂ ಇದೆ’ ಎಂದು ವೂಲ್ಫ್‌ ಅವರು ಫೈನಾನ್ಶಿಯಲ್‌ ಟೈಮ್ಸ್‌ ಅಂಕಣದಲ್ಲಿ ಬರೆದಿದ್ದಾರೆ.

ದೇಶದ ಜನಸಂಖ್ಯೆ ಹಾಗೂ ಅರ್ಥ ವ್ಯವಸ್ಥೆ ಮುಂದಿನ ದಶಕಗಳಲ್ಲಿ ತೀವ್ರ ಬೆಳವಣಿಗೆ ಕಾಣಲಿವೆ. ಪಾಶ್ಚಿಮಾತ್ಯ ದೇಶಗಳು ಭಾರತಕ್ಕೆ ಹತ್ತಿರವಾಗುತ್ತಿರುವುದು ಸಮರ್ಥನೀಯವೇ ಆಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.