ADVERTISEMENT

ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಮೀರಿಸಿದ ಭಾರತ: ಶಿವರಾಜ್ ಸಿಂಗ್ ಚೌಹಾಣ್

ಪಿಟಿಐ
Published 4 ಜನವರಿ 2026, 16:02 IST
Last Updated 4 ಜನವರಿ 2026, 16:02 IST
<div class="paragraphs"><p>ಶಿವರಾಜ್ ಸಿಂಗ್ ಚೌಹಾಣ್</p></div>

ಶಿವರಾಜ್ ಸಿಂಗ್ ಚೌಹಾಣ್

   

ನವದೆಹಲಿ: ‘ಭಾರತವು, ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ಈ ಮೂಲಕ ಅಕ್ಕಿ ಉತ್ಪಾದನೆಯಲ್ಲಿ ಚೀನಾವನ್ನು ಭಾರತ ಮೀರಿಸಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

2024–25ರ ಬೆಳೆ ವರ್ಷದಲ್ಲಿ ಭಾರತವು 15.01 ಕೋಟಿ ಟನ್‌ ಅಕ್ಕಿ ಉತ್ಪಾದನೆ ಮಾಡಿದೆ, ಚೀನಾ ದೇಶವು 14.52 ಕೋಟಿ ಟನ್‌ ಉತ್ಪಾದನೆ ಮಾಡಿದೆ. ಈ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂದು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು. ಅವರು 25 ಬೆಳೆಗಳ 184 ಹೊಸ ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಿದರು.

ADVERTISEMENT

ಈ ತಳಿಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಕೇಂದ್ರ ಹಾಗೂ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಖಾಸಗಿ ಬಿತ್ತನೆ ಬೀಜ ಕಂಪನಿಗಳು ಅಭಿವೃದ್ಧಿಪಡಿಸಿವೆ. 

ಈ ಹೊಸ ತಳಿಗಳು ಹೆಚ್ಚು ಇಳುವರಿ ನೀಡಲಿದ್ದು, ರೈತರ ಆದಾಯವನ್ನು ಹೆಚ್ಚಿಸಲಿವೆ. ಹೆಚ್ಚಿನ ಮಟ್ಟದ ರೋಗ ನಿರೋಧಕ ಶಕ್ತಿ ಹೊಂದಿವೆ. ಈ ತಳಿಗಳನ್ನು ತ್ವರಿತವಾಗಿ ರೈತರಿಗೆ ಲಭ್ಯವಾಗಿಸುವಂತೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

1969ರಿಂದ 2014ರ ನಡುವೆ ಅಧಿಕ ಇಳುವರಿ ನೀಡುವ 3,969 ತಳಿಗಳಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕ ಇಳುವರಿ ನೀಡುವ 3,236 ತಳಿಗಳಿಗೆ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.