ADVERTISEMENT

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆ ಕುಸಿತ

ಪಿಟಿಐ
Published 25 ಫೆಬ್ರುವರಿ 2025, 5:03 IST
Last Updated 25 ಫೆಬ್ರುವರಿ 2025, 5:03 IST
<div class="paragraphs"><p>ಸಾಂಕೇತಿಕ ಚಿತ್ರ</p><p></p></div>

ಸಾಂಕೇತಿಕ ಚಿತ್ರ

   

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ) ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 16 ಪೈಸೆ ಇಳಿಕೆಯಾಗಿದೆ. ಪ್ರತೀ ಡಾಲರ್ ಮೌಲ್ಯ ₹86.88 ಆಗಿದೆ.

ADVERTISEMENT

ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಹೊರಹರಿವು ಮುಂದುವರಿದಿದೆ. ರೂಪಾಯಿ ಮೌಲ್ಯ ಉತ್ತೇಜನಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಪರಿಣಾಮ ಕಾರಿಯಾದ ಕ್ರಮ ಕೈಗೊಂಡಿಲ್ಲ. ಹಾಗಾಗಿ, ರೂಪಾಯಿ ಒತ್ತಡಕ್ಕೆ ಸಿಲುಕಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿಯೂ ದೇಶದ ಆಮದು ಮತ್ತು ರಫ್ತು ವಹಿವಾಟಿನ ನಡುವಿನ ವ್ಯತ್ಯಾಸವಾದ ವ್ಯಾಪಾರ ಕೊರತೆ ಹೆಚ್ಚಿದೆ. ಇದು ಕೂಡ ರೂಪಾಯಿ ಒತ್ತಡಕ್ಕೆ ಸಿಲುಕಲು ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಡಾಲರ್‌ ಎದುರು ಹಲವು ದೇಶಗಳ ಕರೆನ್ಸಿಗಳ ಮೌಲ್ಯ ಕುಸಿದಿರುವ ನಡುವೆಯೇ ಸೋಮವಾರ ರೂಪಾಯಿ ಮೌಲ್ಯ 16 ಪೈಸೆ ಇಳಿಕೆ ಕಂಡಿತ್ತು.

ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಯು ಸದೃಢವಾಗಿದೆ. ಆದರೆ, ಜಾಗತಿಕ ಬಿಕ್ಕಟ್ಟು ಮತ್ತು ಅಮೆರಿಕದ ಸುಂಕ ನೀತಿಯಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಇದರಿಂದ ರೂಪಾಯಿ ಒತ್ತಡಕ್ಕೆ ಸಿಲುಕಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.