ನೇರಳೆ ಹಣ್ಣು
ಬೆಂಗಳೂರು: ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ) ಕರ್ನಾಟಕದಿಂದ ಲಂಡನ್‌ಗೆ ತಾಜಾ ನೇರಳೆ ಹಣ್ಣುಗಳ ರಫ್ತಿಗೆ ಗುರುವಾರ ಚಾಲನೆ ನೀಡಿದೆ.
ಇದು ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ತಲುಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದುವರೆಗೆ ಶೀತಲೀಕೃತ ನೇರಳೆ ಹಣ್ಣುಗಳನ್ನು ಮಾತ್ರ ರಫ್ತು ಮಾಡಲಾಗುತ್ತಿತ್ತು.
ನೇರಳೆ ಹಣ್ಣುಗಳನ್ನು ರೈತ ಉತ್ಪಾದನಾ ಸಂಸ್ಥೆಯೊಂದರಿಂದ (ಎಫ್‌ಪಿಒ) ನೇರವಾಗಿ ಪಡೆದುಕೊಳ್ಳಲಾಗಿದೆ ಎಂದು ಎಪಿಇಡಿಎ ಹೇಳಿದೆ. ರಫ್ತು ಮಾಡುವುದರಿಂದ ನೇರಳೆ ಹಣ್ಣಿಗೆ ಒಳ್ಳೆಯ ಬೆಲೆ ಸಿಗುತ್ತದೆ ಎಂದು ರಫ್ತುದಾರ ಪಾರ್ಥಸಾರಥಿ ಹೇಳಿದ್ದಾರೆ.
ರೈತರಿಗೆ ಈ ಹಣ್ಣು ಮಾರಾಟದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹60ರವರೆಗೆ ಸಿಗುತ್ತದೆ. ಆದರೆ ರಫ್ತು ಮಾಡುವುದರಿಂದ ಕೆ.ಜಿ. ನೇರಳೆ ಹಣ್ಣಿಗೆ ಸರಾಸರಿ ₹110 ಸಿಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.