ನವದೆಹಲಿ/ ಮುಂಬೈ: ಐಐಎಫ್‌ಎಲ್ ಸಮೂಹದ ಕಂಪನಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಶೋಧ ಕಾರ್ಯ ನಡೆಸಿದ್ದಾರೆ.
ಐಐಎಫ್‌ಎಲ್ ಫೈನಾನ್ಸ್, 360 ಒನ್ ವ್ಯಾಮ್ ಮತ್ತು ಐಐಎಫ್‌ಎಲ್ ಸೆಕ್ಯುರಿಟೀಸ್ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
360 ಒನ್ ವ್ಯಾಮ್ ಷೇರಿನ ಮೌಲ್ಯದಲ್ಲಿ ಶೇ 12ರಷ್ಟು ಇಳಿಕೆಯಾಗಿದೆ. ಐಐಎಫ್‌ಎಲ್ ಫೈನಾನ್ಸ್ ಶೇ2.24 ಮತ್ತು ಐಐಎಫ್‌ಎಲ್ ಕ್ಯಾಪಿಟಲ್ ಸರ್ವಿಸಸ್ ಷೇರಿನ ಮೌಲ್ಯವು ಶೇ 2.23ರಷ್ಟು ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.