ADVERTISEMENT

ಕೋವಿಡ್‌ ಸಂಕಷ್ಟದ ಹೊರತಾಗಿಯೂ ದೇಶದ ಕೃಷಿ ಉತ್ಪನ್ನ ರಫ್ತು ಹೆಚ್ಚಳ

ಮಾರ್ಚ್‌–ಜೂನ್‌ ಅವಧಿ

ಪಿಟಿಐ
Published 18 ಆಗಸ್ಟ್ 2020, 13:57 IST
Last Updated 18 ಆಗಸ್ಟ್ 2020, 13:57 IST
   

ನವದೆಹಲಿ: ಕೋವಿಡ್‌–19 ಬಿಕ್ಕಟ್ಟಿನ ಹೊರತಾಗಿಯೂ ಈ ವರ್ಷದ ಮಾರ್ಚ್‌–ಜೂನ್‌ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು ಮೌಲ್ಯ ₹ 25,552 ಕೋಟಿಗಳಷ್ಟಾಗಿದೆ. 2019ರ ಮಾರ್ಚ್‌–ಜೂನ್‌ ಅವಧಿಯಲ್ಲಿ ₹ 20,734 ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳು ರಫ್ತಾಗಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಫ್ತು ಮೌಲ್ಯ ಶೇಕಡ 23ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸಲು ‘ರಫ್ತು ಉತ್ತೇಜನ ವೇದಿಕೆ’ಯಡಿ ನಿರ್ದಿಷ್ಟ ಉತ್ಪನ್ನಗಳ ರಫ್ತಿಗೆ ಯೋಜನೆ ರೂಪಿಸಲಾಗಿದೆ ಎಂದು ಅದು ಹೇಳಿದೆ.

ವಿದೇಶಿ ವಿನಿಮಯ ಗಳಿಕೆಗೆ ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವುದು ಬಹಳ ಮುಖ್ಯವಾಗಿದೆ.ಗೋಧಿ ಉತ್ಪಾದನೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಆದರೆ, ರಫ್ತು ಮಾಡುವುದರಲ್ಲಿ 34ನೇ ಸ್ಥಾನದಲ್ಲಿದೆ.

ADVERTISEMENT

ಗಲ್ಫ್‌ ದೇಶಗಳು ಭಾರತಕ್ಕೆ ಪ್ರಮುಖ ಮಾರುಕಟ್ಟೆಯಾಗಿವೆ. ಹೀಗಾಗಿ ಅಲ್ಲಿ ಮಾರುಕಟ್ಟೆ ಪಾಲನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಗಮನ ನೀಡಲಾಗುತ್ತಿದೆ. ಸದ್ಯ ಗಲ್ಫ್‌ ದೇಶಗಳ ಒಟ್ಟಾರೆ ಆಮದಿನಲ್ಲಿ ಭಾರತದ ಪಾಲು ಶೇ 10–12ರಷ್ಟು ಮಾತ್ರವೇ ಇದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.