ADVERTISEMENT

ದೇಶದ ನಿರುದ್ಯೋಗ ದರ ಶೇ 7.83 ಕ್ಕೆ ಏರಿಕೆ: ಕರ್ನಾಟಕದಲ್ಲಿ ಎಷ್ಟಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 10:21 IST
Last Updated 2 ಮೇ 2022, 10:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮಾರ್ಚ್‌ನಲ್ಲಿ ಶೇ 7.60ರಷ್ಟು ಇದ್ದ ದೇಶದ ನಿರುದ್ಯೋಗ ದರ ಏಪ್ರಿಲ್‌ನಲ್ಲಿ ಶೇ 7.83 ಕ್ಕೆ ಏರಿಕೆಯಾಗಿದೆ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ ದೇಶದ ನಿರುದ್ಯೋಗ ದರವು ಒಂದು ತಿಂಗಳ ಅವಧಿಯಲ್ಲಿ ಶೇ 0.23ರಷ್ಟು ಹೆಚ್ಚಳ ಕಂಡಿದೆ.

ಇಡೀ ದೇಶದಲ್ಲೇ ಹರಿಯಾಣದಲ್ಲಿ ನಿರುದ್ಯೋಗ ದರ ಹೆಚ್ಚಿದೆ. ಅಲ್ಲಿನ ದರ ಶೇ 34.5ರಷ್ಟು ದಾಖಲಾಗಿದೆ. ಈ ದರವು ರಾಜಸ್ಥಾನದಲ್ಲಿ ಶೇ 28.8, ಬಿಹಾರದಲ್ಲಿ 21.1, ಜಮ್ಮು ಮತ್ತು ಕಾಶ್ಮೀರದಲ್ಲಿ 15.6, ಗೋವಾದಲ್ಲಿ 15.5 ಮತ್ತು ತ್ರಿಪುರಾದಲ್ಲಿ 14.6 ಇದೆ.

ಇನ್ನು, ಕರ್ನಾಟಕದಲ್ಲಿ ನಿರುದ್ಯೋಗ ದರ ಶೇ 2.7ರಷ್ಟಿದೆ. ಹಿಮಾಚಲ ಪ್ರದೇಶದಲ್ಲಿ ದೇಶದಲ್ಲೇ ಅತ್ಯಂತ ಕಡಿಮೆ ದರ ದಾಖಲಾಗಿದೆ. ಅಲ್ಲಿನ ನಿರುದ್ಯೋಗ ದರ ಶೇ 0.2 ರಷ್ಟು ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.