ADVERTISEMENT

ಅಡುಗೆ ಎಣ್ಣೆ ಆಮದು ಶೇ 28ರಷ್ಟು ಕುಸಿತ: ಎಸ್‌ಇಎ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 14:40 IST
Last Updated 12 ಫೆಬ್ರುವರಿ 2024, 14:40 IST
ಖಾದ್ಯ ತೈಲ
ಖಾದ್ಯ ತೈಲ   

ನವದೆಹಲಿ: ದೇಶದ ಅಡುಗೆ ಎಣ್ಣೆ ಆಮದು ಜನವರಿಯಲ್ಲಿ ಶೇ 28ರಷ್ಟು ಕುಸಿತವಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಸೋಮವಾರ ತಿಳಿಸಿದೆ. 

2023ರ ಜನವರಿಯಲ್ಲಿ 16.62 ಲಕ್ಷ ಟನ್‌ ಅಡುಗೆ ಎಣ್ಣೆ ಆಮದಾಗಿದ್ದರೆ, ಈ ಜನವರಿಯಲ್ಲಿ 12 ಲಕ್ಷ ಟನ್‌ಗೆ ಇಳಿಕೆಯಾಗಿದೆ ಎಂದು ತಿಳಿಸಿದೆ.

2023-24ರ ತೈಲ ವರ್ಷದ ಮೊದಲ ತ್ರೈಮಾಸಿಕದಲ್ಲಿ (ನವೆಂಬರ್‌–ಜನವರಿ) ತೈಲ ಆಮದು 47.73 ಲಕ್ಷ ಟನ್‌ನಿಂದ 36.73 ಲಕ್ಷ ಟನ್‌ಗೆ ಇಳಿಕೆಯಾಗಿದೆ. ಒಟ್ಟು ಶೇ 23ರಷ್ಟು ಕಡಿಮೆ ಆಗಿದೆ.

ADVERTISEMENT

ಎಸ್‌ಇಎ ಪ್ರಕಾರ ಜನವರಿಯಲ್ಲಿ 7,82,983 ಟನ್‌ ತಾಳೆ ಎಣ್ಣೆ ಮತ್ತು 4,08,938 ಟನ್‌ ಇತರೆ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗಿದೆ. ಫೆಬ್ರುವರಿ 1ರ ವೇಳೆಗೆ, ಒಟ್ಟು ಖಾದ್ಯ ತೈಲ ಸಂಗ್ರಹವು 26.49 ಲಕ್ಷ ಟನ್‌ ಆಗಿದ್ದು, ಹಿಂದಿನ ಅವಧಿಗೆ ಹೋಲಿಸಿದರೆ ಇದು ಶೇ 7.64ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದೆ.

ಕಡಿಮೆ ಉತ್ಪಾದನೆ, ಜಾಗತಿಕ ಆರ್ಥಿಕ ಸಮಸ್ಯೆಗಳು ಮತ್ತು ಪೂರೈಕೆ ನಿರ್ಬಂಧಗಳಿಂದಾಗಿ ಖಾದ್ಯ ತೈಲದ ದರವು ಈ ವರ್ಷ ಹೆಚ್ಚಾಗಬಹುದು. ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಾದ ಮಲೇಷ್ಯಾ ಮತ್ತು ಇಂಡೊನೇಷ್ಯಾ ಜೈವಿಕ– ಡೀಸೆಲ್ ಉತ್ಪಾದನೆಗೆ ಬಳಸುತ್ತಿರುವುದರಿಂದ ತಾಳೆ ಎಣ್ಣೆಯ ಲಭ್ಯತೆ ಕಡಿಮೆಯಾಗಿದೆ ಎಂದು ಎಸ್‌ಇಎ ಹೇಳಿದೆ. 

ಭಾರತವು, ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ, ಅರ್ಜೆಂಟೀನಾದಿಂದ ಸೋಯಾಬಿನ್‌, ರಷ್ಯಾ ಮತ್ತು ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ.

ಅಡುಗೆ ಎಣ್ಣೆ ಆಮದು (ಲಕ್ಷ ಟನ್‌ಗಳಲ್ಲಿ)

2023 ಜನವರಿ ; 16.61

ಫೆಬ್ರುವರಿ;11.14

ಮಾರ್ಚ್‌;11.72

ಏಪ್ರಿಲ್‌;10.50

ಮೇ; 10.58

ಜೂನ್‌; 13.14

ಜುಲೈ;17.72

ಆಗಸ್ಟ್‌;18.66

ಸೆಪ್ಟೆಂಬರ್‌; 15.52

ಅಕ್ಟೋಬರ್; 10.30

ನವೆಂಬರ್‌; 11.61

ಡಿಸೆಂಬರ್‌; 13.12

2024 ಜನವರಿ; 11.91

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.