
ಇಂಡಿಗೊ
(ಪಿಟಿಐ ಚಿತ್ರ)
ಮುಂಬೈ: ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಮುಂದುವರಿದಿದ್ದು, ಇಂದು (ಗುರುವಾರ) ಬೆಂಗಳೂರಿನಿಂದ 60 ವಿಮಾನಗಳ ಹಾರಾಟ ರದ್ದುಗೊಂಡಿವೆ ಎಂದು ಮೂಲಗಳು ತಿಳಿಸಿವೆ.
32 ಆಗಮನ ಹಾಗೂ 28 ನಿರ್ಗಮನ ಸೇರಿದಂತೆ ಬೆಂಗಳೂರಿನಿಂದ 60 ವಿಮಾನಗಳ ಹಾರಾಟ ರದ್ದುಗೊಂಡಿವೆ ಎಂದು ಹೇಳಿದೆ.
ಏತನ್ಮಧ್ಯೆ ಇಂಡಿಗೊ ಕಾರ್ಯಾಚರಣೆಯ ಅಡಚಣೆಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಸಮನ್ಸ್ ಜಾರಿ ಮಾಡಿದೆ.
ಬುಧವಾರದಂದು ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ 220 ವಿಮಾನಗಳ ಹಾರಾಟ ರದ್ದಾಗಿತ್ತು.
ಸತತ 10 ದಿನಗಳ ಬಿಕ್ಕಟ್ಟಿನ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿದ್ದ ಇಂಡಿಯೊ ಮುಖ್ಯಸ್ಥ ವಿಕ್ರಮ್ ಮೆಹ್ತಾ, ಕಾರ್ಯಾಚರಣೆಯ ಅಡಚಣೆಗಾಗಿ ಕ್ಷಮೆಯಾಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.