
ನವದೆಹಲಿ: ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಅತಿದೊಡ್ಡ ಕಂಪನಿಯಾಗಿರುವ ಇಂಡಿಗೊ ಡಿಸೆಂಬರ್ ತ್ರೈಮಾಸಿಕದ ಲಾಭದಲ್ಲಿ ಶೇಕಡ 78ರಷ್ಟು ಇಳಿಕೆ ಕಂಡಿದೆ. ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನ ಹಾಗೂ ಡಿಸೆಂಬರ್‌ನಲ್ಲಿ ವಿಮಾನಗಳ ಕಾರ್ಯಾಚರಣೆಯಲ್ಲಿ ಎದುರಾಗಿದ್ದ ಸಮಸ್ಯೆಗಳು ಲಾಭದ ಪ್ರಮಾಣವನ್ನು ತಗ್ಗಿಸಿವೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹549 ಕೋಟಿ ಲಾಭ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹2,448 ಕೋಟಿ ಆಗಿತ್ತು. ವಿಮಾನಗಳ ಸಂಚಾರದಲ್ಲಿ ಉಂಟಾದ ಸಮಸ್ಯೆಗಳ ಪರಿಣಾಮವಾಗಿ ಕಂಪನಿಯು ₹577 ಕೋಟಿ, ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಕಾರಣದಿಂದಾಗಿ ₹969 ಕೋಟಿ ಹೊರೆ ಕಂಪನಿಯ ಮೇಲೆ ಬಿದ್ದಿದೆ.
ಆದರೆ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ವರಮಾನ ಹೆಚ್ಚಳವಾಗಿದೆ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹22,992 ಕೋಟಿ ವರಮಾನ ಗಳಿಸಿತ್ತು. ಅದು ಈ ಬಾರಿ ₹24,540 ಕೋಟಿಗೆ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.