ADVERTISEMENT

ಈಕ್ವಿಟಿ ಎಂಎಫ್‌: ಏಪ್ರಿಲ್‌ನಲ್ಲಿ ತಗ್ಗಿದ ಒಳಹರಿವು

ಪಿಟಿಐ
Published 11 ಮೇ 2021, 14:18 IST
Last Updated 11 ಮೇ 2021, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಮಾರ್ಚ್‌ನಲ್ಲಿ ಆಗಿದ್ದ ಬಂಡವಾಳ ಹೂಡಿಕೆಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಇಳಿಕೆ ಕಂಡುಬಂದಿದೆ. ಮಾರ್ಚ್‌ನಲ್ಲಿ ₹ 9,115 ಕೋಟಿ ಹೂಡಿಕೆ ಆಗಿತ್ತು. ಏಪ್ರಿಲ್‌ನಲ್ಲಿ ₹ 3,437 ಕೋಟಿ ಹೂಡಿಕೆ ಆಗಿದೆ.

ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಈ ಮಾಹಿತಿ ನೀಡಿದೆ.

2020ರ ಜುಲೈನಿಂದ 2021ರ ಫೆಬ್ರುವರಿವರೆಗೂ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಂದ ಬಂಡವಾಳ ಹಿಂತೆಗೆತ ಕಂಡುಬಂದಿತ್ತು.

ADVERTISEMENT

ಈ ವರ್ಷದ ಏಪ್ರಿಲ್‌ನಲ್ಲಿ ಸಾಲಪತ್ರ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆದಾರರು ₹ 1 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ. ಮಾರ್ಚ್‌ನಲ್ಲಿ ₹ 52,528 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು. ಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್‌) ಏಪ್ರಿಲ್‌ನಲ್ಲಿ ₹ 680 ಕೋಟಿ ಬಂಡವಾಳ ಹೊರಹೋಗಿದೆ.

ಮ್ಯೂಚುವಲ್ ಫಂಡ್‌ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ಮಾರ್ಚ್‌ ಅಂತ್ಯದ ವೇಳೆಗೆ ₹ 31.43 ಲಕ್ಷ ಕೋಟಿಗಳಷ್ಟಿತ್ತು. ಏಪ್ರಿಲ್‌ ಅಂತ್ಯದ ವೇಳೆಗೆ ₹ 32.38 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.