ADVERTISEMENT

ಕೋವಿಡ್ ಬಿಕ್ಕಟ್ಟು | ರಿಯಲ್‌ ಎಸ್ಟೇಟ್‌ನಲ್ಲಿ ತಗ್ಗಿದ ಸಾಂಸ್ಥಿಕ ಹೂಡಿಕೆ

ಪಿಟಿಐ
Published 30 ಮೇ 2020, 20:58 IST
Last Updated 30 ಮೇ 2020, 20:58 IST
   

ನವದೆಹಲಿ:2019–20ನೇ ಹಣಕಾಸು ವರ್ಷದಲ್ಲಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಸಾಂಸ್ಥಿಕ ಹೂಡಿಕೆ ಶೇ 12ರಷ್ಟು ಇಳಿಕೆಯಾಗಿದ್ದು, ₹33,800 ಕೋಟಿಗಳಷ್ಟಾಗಿದೆ. ಇದು ಐದು ವರ್ಷಗಳ ಕನಿಷ್ಠ ಮಟ್ಟವಾಗಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಹೂಡಿಕೆಯು ಶೇ 44ರಷ್ಟು ಕುಸಿದಿದ್ದು, ₹7,825 ಕೋಟಿಗಳಷ್ಟಾಗಿದೆ ಎಂದು ಅಮೆರಿಕದ ಆಸ್ತಿ ಸಲಹಾ ಸಂಸ್ಥೆ ವೆಸ್ಟಿಯನ್‌ ಹೇಳಿದೆ.

ದೇಶದ ಆರ್ಥಿಕ ಬೆಳವಣಿಗೆಯ ಬಗ್ಗೆ ಮೂಡಿರುವ ಅನಿಶ್ಚಿತತೆ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಸೃಷ್ಟಿಯಾದ ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಹೂಡಿಕೆ ಕಡಿಮೆಯಾಗಿದೆ ಎಂದು ತಿಳಿಸಿದೆ.

ADVERTISEMENT

ಕೋವಿಡ್‌ನಿಂದಾಗಿ ವಾಣಿಜ್ಯ ಮಾರುಕಟ್ಟೆಯು ಎರಡರಿಂದ ಮೂರು ತ್ರೈಮಾಸಿಗಳವರೆಗೆ ಮಂದಗತಿಯ ಬೆಳವಣಿಗೆ ಕಾಣಲಿದೆ. ಆದರೆ ವಸತಿ ಮಾರುಕಟ್ಟೆ ಚೇತರಿಸಿಕೊಳ್ಳಲು ದೀರ್ಘವಾಧಿ ಬೇಕಾಗಲಿದೆ ಎಂದಿದೆ.

ಹೂಡಿಕೆ ವಿವರ

90%:ಒಟ್ಟಾರೆ ಹೂಡಿಕೆಯಲ್ಲಿ ಬೆಂಗಳೂರು, ಮುಂಬೈ ಮತ್ತು ಪುಣೆ ಪಾಲು

42%:ಮುಂಬೈನಲ್ಲಿ ಆಗಿರುವ ಹೂಡಿಕೆ

37%:ಬೆಂಗಳೂರಿನಲ್ಲಿ ಆಗಿರುವ ಹೂಡಿಕೆ

67%:ಒಟ್ಟಾರೆ ಹೂಡಿಕೆಯಲ್ಲಿ ಅಮೆರಿಕ ಮೂಲದ ಸಾಂಸ್ಥಿಕ ಹೂಡಿಕೆ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.