ADVERTISEMENT

ದೇಶದಲ್ಲಿ ಇಂಟರ್‌ನೆಟ್‌ ಬಳಕೆ ಹೆಚ್ಚಳ; ರಿಲಯನ್ಸ್‌ ಜಿಯೊ ಬಳಕೆದಾರರು ಶೇ 52.3

ಪಿಟಿಐ
Published 20 ಸೆಪ್ಟೆಂಬರ್ 2020, 11:46 IST
Last Updated 20 ಸೆಪ್ಟೆಂಬರ್ 2020, 11:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆಯು 2020ರ ಮಾರ್ಚ್‌ ಅಂತ್ಯಕ್ಕೆ 74.31 ಕೋಟಿಗೆ ಏರಿಕೆಯಾಗಿದೆ. ಮೂರು ತಿಂಗಳ ಅವಧಿಯಲ್ಲಿ ಶೇಕಡ 3.4ರಷ್ಟು ಬೆಳವಣಿಗೆ ಕಂಡಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ.

2019ರ ಡಿಸೆಂಬರ್ ಅಂತ್ಯಕ್ಕೆ ಅಂತರ್ಜಾಲ ಬಳಕೆದಾರರ ಸಂಖ್ಯೆ 71.87 ಕೋಟಿ ಇತ್ತು.

ವಯರ್‌ಲೆಸ್‌ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 72.07 ಕೋಟಿ ಇದ್ದರೆ, ವಯರ್ಡ್‌ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 2.24 ಕೋಟಿ ಇದೆ. ಅಂತರ್ಜಾಲ ಬಳಸಲು ಬ್ರಾಡ್‌ಬ್ಯಾಂಡ್‌ ಬಳಸಿರುವವರ ಪ್ರಮಾಣ ಶೇ 92.5ರಷ್ಟಿದೆ ಎಂದು ಟ್ರಾಯ್‌ ಹೇಳಿದೆ.

ADVERTISEMENT

2020ರ ಜನವರಿ–ಮಾರ್ಚ್‌ ಅವಧಿಯ ಇಂಡಿಯನ್‌ ಟೆಲೆಕಾಂ ಸರ್ವೀಸಸ್‌ ಪರ್ಫಾರ್ಮೆನ್ಸ್‌ ಇಂಡಿಕೇಟರ್ಸ್‌ ವರದಿಯಲ್ಲಿ ಈ ಮಾಹಿತಿ ಇದೆ.

ಶೇ 96.90ರಷ್ಟು ಜನ ಮೊಬೈಲ್‌ ಮೂಲಕ ಅಂತರ್ಜಾಲ ಬಳಕೆ ಮಾಡುತ್ತಿದ್ಧಾರೆ. ವಯರ್‌ ಸೌಲಭ್ಯದ ಮೂಲಕ ಅಂತರ್ಜಾಲ ಬಳಸುತ್ತಿರುವವರ ಪ್ರಮಾಣ ಶೇ 3.02ರಷ್ಟಿದೆ. ವಯರ್‌ಲೆಸ್‌ ಅಂತರ್ಜಾಲ ಬಳಕೆಯಲ್ಲಿ ಜಿಯೊದ ಪಾಲು ಶೇ 53.76ರಷ್ಟಿದೆ. ಭಾರ್ತಿ ಏರ್‌ಟೆಲ್‌ ಶೇ 24ರಷ್ಟು ಪಾಲು ಹೊಂದಿದೆ.

ಅಂಕಿ–ಅಂಶ‌

ಕಂಪನಿಗಳ ಮಾರುಕಟ್ಟೆ ಪಾಲು

ರಿಲಯನ್ಸ್‌ ಜಿಯೊ; 52.3%

ಭಾರ್ತಿ ಏರ್‌ಟೆಲ್‌; 23.6%

ವೊಡಾಫೋನ್‌ ಐಡಿಯಾ; 18.7%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.