ADVERTISEMENT

ಡಿಜಿಟಲ್‌ ರೂಪದಲ್ಲಿ ವಿಮಾ ದಾಖಲೆ: ಐಆರ್‌ಡಿಎಐ

ಪಿಟಿಐ
Published 14 ಫೆಬ್ರುವರಿ 2021, 15:47 IST
Last Updated 14 ಫೆಬ್ರುವರಿ 2021, 15:47 IST
   

ನವದೆಹಲಿ: ವಿಮಾ ಪಾಲಿಸಿ ಹೊಂದಿರುವವರಿಗೆ ಪಾಲಿಸಿಯ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಬೇಕು ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಕಂಪನಿಗಳಿಗೆ ಸೂಚನೆ ನೀಡಿದೆ. ಈ ದಾಖಲೆ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಪಾಲಿಸಿದಾರರಿಗೆ ತಿಳಿಸಿಕೊಡಬೇಕು ಎಂದು ಕೂಡ ಅದು ಸೂಚಿಸಿದೆ.

ಈ ಕ್ರಮಗಳನ್ನು ಕೈಗೊಳ್ಳುವುದರಿಂದ ವಿಮಾ ಕ್ಲೇಮ್‌ ಪ್ರಕ್ರಿಯೆಗೆ ವೇಗ ಸಿಗುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಪಾಲಿಸಿ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ನೀಡುವುದರಿಂದ ವೆಚ್ಚ ಕಡಿಮೆ ಆಗುತ್ತದೆ, ದಾಖಲೆಗಳು ಸಿಕ್ಕಿಲ್ಲ ಎಂದು ಗ್ರಾಹಕರು ದೂರುವುದು ಇಲ್ಲವಾಗುತ್ತದೆ, ವ್ಯಾಜ್ಯಗಳು ಕಡಿಮೆಯಾಗುತ್ತವೆ ಎಂದು ಪ್ರಾಧಿಕಾರ ಹೇಳಿದೆ.

ಡಿಜಿಲಾಕರ್‌ ಬಳಸುವುದು ಹೇಗೆ ಎಂಬ ಬಗ್ಗೆ ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ಮಾಹಿತಿ ನೀಡಬೇಕು. ತಮ್ಮ ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಇರಿಸುವುದು ಹೇಗೆಂಬ ಬಗ್ಗೆಯೂ ತಿಳಿಸಬೇಕು ಎಂದು ಪ್ರಾಧಿಕಾರ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.