ADVERTISEMENT

IT ವಲಯ: 6 ತಿಂಗಳಲ್ಲಿ ಶೇ 12ರಷ್ಟು ಉದ್ಯೋಗ ಹೆಚ್ಚಳ; ಬೆಂಗಳೂರಿನಲ್ಲೇ ಅಧಿಕ– ವರದಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 13:31 IST
Last Updated 27 ನವೆಂಬರ್ 2024, 13:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಐಸ್ಟಾಕ್ ಚಿತ್ರ

ಮುಂಬೈ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ಆರು ತಿಂಗಳಲ್ಲಿ ತಂತ್ರಜ್ಞಾನ ವ್ಯಾಪಕವಾಗಿ ವೃದ್ಧಿಯಾಗಲಿದ್ದು, ಜಾಗತಿಕ ಮಟ್ಟದಲ್ಲಿ ಈ ಉದ್ಯಮದ ದಿಸೆ ಬದಲಾಗಲಿದೆ. ಆರ್ಥಿಕತೆ ವೃದ್ಧಿಯಾಗಲಿದೆ. ಹೀಗಾಗಿ ಉದ್ಯೋಗಾವಕಾಶಗಳೂ ಮುಂದಿನ ಆರು ತಿಂಗಳಲ್ಲಿ ಶೇ 10ರಿಂದ 12ರಷ್ಟು ಹೆಚ್ಚಳವಾಗಲಿವೆ ಎಂದು ಕ್ವೆಸ್ ಕ್ರಾಪ್‌ ಎಂಬ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ADVERTISEMENT

ಜನರೇಟಿವ್ ಎಐ, ಡೀಪ್‌ ಟೆಕ್‌ ಮತ್ತು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಗಳು ಬೆಳವಣಿಗೆ ಕಾಣಲಿವೆ. ಇದರಿಂದಾಗಿ 2030ರೊಳಗೆ ಹತ್ತು ಲಕ್ಷ ಉದ್ಯೋಗ ಸೃಜಿಸಲಿದೆ. ಗ್ಲೋಬಲ್ ಕೇಪಬಿಲಿಟಿ ಸೆಂಟರ್ ಮತ್ತು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಕ್ರಮವಾಗಿ ಶೇ 71 ಹಾಗೂ ಶೆ 58ರಷ್ಟು ಬೆಳವಣಿಗೆಯಾಗಿದೆ ಎಂದೆನ್ನಲಾಗಿದೆ.

‘ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಪ್ರತಿಭೆಗಳು ಹಾಗೂ ಭಿನ್ನವಾಗಿ ಆಲೋಚನೆಗಳುಳ್ಳವರ ಸಂಖ್ಯೆ ಬೆಳೆಯುತ್ತಲೇ ಇದೆ. ಇದರಿಂದಾಗಿ ಡಿಜಿಟಲ್ ಕ್ರಾಂತಿಯಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಮುಂದಿನ ಆರು ತಿಂಗಳಲ್ಲಿ ಐಟಿ ಸೇವಾ ವಲಯದಲ್ಲಿ ನೇಮಕಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಲಿವೆ’ ಎಂದು ಕ್ವೆಸ್‌ ಐಟಿ ಸ್ಟಾಫಿಂಗ್‌ ಸಿಇಒ ಕಪಿಲ್ ಜೋಶಿ ತಿಳಿಸಿದರು.

2025ರ ಎರಡನೇ ತ್ರೈಮಾಸಿಕದೊಳಗೆ ಇಆರ್‌ಪಿ, ಟೆಸ್ಟಿಂಗ್‌, ನೆಟ್ವರ್ಕಿಂಗ್ ಹಾಗೂ ಡಾಟಾ ಸೈನ್ಸ್ ಕ್ಷೇತ್ರದಲ್ಲಿ ನೌಕರಿ ಬೇಡಿಕೆಯು ಶೇ 79ರಷ್ಟು ವೃದ್ಧಿ ಕಾಣಲಿದೆ. ಇವುಗಳೊಂದಿಗೆ ಜಾವಾ ಕ್ಷೇತ್ರದಲ್ಲಿ ಶೇ 30, ಸೈಬರ್‌ ಸೆಕ್ಯುರಿಟಿ– ಶೇ 20, ಡೆವ್‌ಆಪ್ಸ್‌– ಶೇ 25ರಷ್ಟು ಉದ್ಯೋಗ ಬೆಳವಣಿಗೆ ಕಾಣಲಿದೆ. ಕ್ಷೇತ್ರವಾರು ಬೆಳವಣಿಗೆಯಲ್ಲಿ ಹೈ ಟೆಕ್ ಹಾಗೂ ಕನ್ಸಲ್ಟಿಂಗ್‌ ಕ್ಷೇತ್ರದಲ್ಲಿ ಶೇ 11, ಉತ್ಪಾದನಾ ವಲಯದಲ್ಲಿ ಶೇ 9 ಹಾಗೂ ಬಿಎಫ್‌ಎಸ್‌ಐ ಕ್ಷೇತ್ರದಲ್ಲಿ ಶೇ 8ರಷ್ಟು ಉದ್ಯೋಗ ಸೃಜನೆಯಾಗಲಿದೆ ಎಂದು ಈ ಸಂಸ್ಥೆ ಹೇಳಿದೆ.

ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಅನಾಲಿಟಿಕ್ಸ್‌, ಸೈಬರ್‌ಸೆಕ್ಯುರಿಟಿ, ಕ್ಲೌಡ್‌ ಹಾಗೂ ಡೆವ್‌ಆಪ್ಸ್‌ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯಲಿದೆ. ಜಾಗತಿಕ ಮಟ್ಟದಲ್ಲಿ ಈ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ. ಅವುಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿರಲಿದೆ ಎಂದೆನ್ನಲಾಗಿದೆ. ನಂತರದ ಸ್ಥಾನಗಳನ್ನು ಹೈದರಾಬಾದ್ ಹಾಗೂ ಪುಣೆ ಪಡೆಯಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.