ADVERTISEMENT

ಜೆಟ್‌ ಪುನಶ್ಚೇತನ ಕೈಬಿಟ್ಟ ಬ್ಯಾಂಕ್‌ಗಳು

ಪಿಟಿಐ
Published 17 ಜೂನ್ 2019, 19:45 IST
Last Updated 17 ಜೂನ್ 2019, 19:45 IST
ಜೆಟ್‌ ಏರ್‌ವೇಸ್‌
ಜೆಟ್‌ ಏರ್‌ವೇಸ್‌   

ಮುಂಬೈ: ಹಣಕಾಸಿನ ಮುಗ್ಗಟ್ಟಿನಿಂದಾಗಿ ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತಗೊಳಿಸಿದ್ದ ಜೆಟ್‌ ಏರ್‌ವೇಸ್‌ನ ಪುನಶ್ಚೇತನ ಪ್ರಕ್ರಿಯೆ ಕೈಬಿಡಲು ಬ್ಯಾಂಕ್‌ಗಳು ನಿರ್ಧರಿಸಿವೆ.

ಸಂಸ್ಥೆಯಿಂದ ₹ 8 ಸಾವಿರ ಕೋಟಿ ಸಾಲದ ಬಾಕಿ ವಸೂಲಿ ಮಾಡಲು ಸಂಸ್ಥೆಯನ್ನು ಮಾರಾಟ ಮಾಡುವ ಬದಲಿಗೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮೂಲಕ ದಿವಾಳಿ ಪ್ರಕ್ರಿಯೆಗೆ ಒಳಪಡಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದಲ್ಲಿನ ಬ್ಯಾಂಕ್‌ಗಳ ಒಕ್ಕೂಟವು ತೀರ್ಮಾನಿಸಿವೆ. ಸೋಮ ವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

25 ವರ್ಷಗಳ ಹಿಂದೆ ಆರಂಭ ಗೊಂಡಿದ್ದ ಜೆಟ್‌ ಏರ್‌ವೇಸ್‌, ಒಂದೊಮ್ಮೆ ದೇಶದ ಅತಿದೊಡ್ಡ ಖಾಸಗಿ ವಿಮಾನ ಯಾನ ಸಂಸ್ಥೆಯಾಗಿತ್ತು. ಹಣದ ಮುಗ್ಗಟ್ಟಿನಿಂದ ಏಪ್ರಿಲ್‌ 17ರಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಿತ್ತು.

ADVERTISEMENT

ದಿವಾಳಿ ಪ್ರಕ್ರಿಯೆಗೆ ಒಳಪಟ್ಟ ಬೆರಳೆಣಿಕೆಯ ಪ್ರಕರಣಗಳು ಕಾಲಮಿತಿ ಒಳಗೆ ಬಗೆಹರಿದಿವೆ. ಉಳಿದಂತೆ ಈ ಪ್ರಕ್ರಿಯೆ ಸಾಕಷ್ಟು ವಿಳಂಬಗೊಳ್ಳಲಿದೆ. ಸಂಸ್ಥೆಯು ಬಾಕಿ ಉಳಿಸಿಕೊಂಡಿರುವ ಮೊತ್ತವು ₹ 36 ಸಾವಿರ ಕೋಟಿಗಳಷ್ಟಿದೆ. ಅದಕ್ಕೆ ಹೋಲಿಸಿದರೆ ಸಂಸ್ಥೆಯ ಬಳಿ ಇರುವ ಸಂಪತ್ತು ಅತ್ಯಲ್ಪ ಪ್ರಮಾಣದಲ್ಲಿ ಇದೆ.

ಎತಿಹಾದ್‌ – ಹಿಂದೂಜಾ ಒಕ್ಕೂಟವು ಸಂಸ್ಥೆಯನ್ನು ಖರೀದಿಸಲು ಆಸಕ್ತಿ ತೋರಿತ್ತು. ಆದರೆ, ಇದುವರೆಗೂ ಸ್ಪಷ್ಟ ಪ್ರಸ್ತಾವ ಮುಂದಿಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.