ADVERTISEMENT

ಪಾಂಗ್ಯಾಂಗ್ ಸರೋವರದ ಬಳಿ ಜಿಯೊ 4ಜಿ ಸೇವೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 16:03 IST
Last Updated 7 ಜೂನ್ 2022, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಡಾಖ್‌ನ ಪಾಂಗ್ಯಾಂಗ್ ಸರೋವರದ ಬಳಿ ಇರುವ ಹಳ್ಳಿಯೊಂದರಲ್ಲಿ ರಿಲಯನ್ಸ್‌ ಜಿಯೊ 4ಜಿ ಸೇವೆಗಳನ್ನು ಆರಂಭಿಸಿದೆ.

ಪಾಂಗ್ಯಾಂಗ್‌ ಸರೋವರದ ಬಳಿಯ ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ 4ಜಿ ಸೇವೆ ಆರಂಭಿಸಿರುವ ಮೊದಲ ದೂರಸಂಪರ್ಕ ಕಂಪನಿ ತಾನು ಎಂದು ಜಿಯೊ ಪ್ರಕಟಣೆಯಲ್ಲಿ ಹೇಳಿದೆ. ಸ್ಪಾಂಗ್‌ಮಿಕ್‌ ಗ್ರಾಮದಲ್ಲಿ ಜಿಯೊ ಟವರ್‌ಅನ್ನು ಲಡಾಖ್‌ನ ಲೋಕಸಭಾ ಸದಸ್ಯ ಜಮ್ಯಾಂಗ್‌ ಶೆರಿಂಗ್‌ ನಾಮ್‌ಗ್ಯಾಲ್‌ ಉದ್ಘಾಟಿಸಿದ್ದಾರೆ.

‘4ಜಿ ಸೇವೆ ಶುರುವಾಗಿರುವ ಕಾರಣ ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ. ಪ್ರವಾಸಿಗರಿಗೆ ಹಾಗೂ ಸೇನಾಪಡೆಯ ಸದಸ್ಯರಿಗೆ ಉತ್ತಮ ಸಂಪರ್ಕ ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.