
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಒಡೆತನದಲ್ಲಿರುವ ಜಿಯೊ ಪ್ಲ್ಯಾಟ್‌ಫಾರ್ಮ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯವು 2027ಕ್ಕೆ 148 ಬಿಲಿಯನ್ ಡಾಲರ್ (ಈಗಿನ ರೂಪಾಯಿ ಮೌಲ್ಯದ ಲೆಕ್ಕದಲ್ಲಿ ಅಂದಾಜು ₹12.99 ಲಕ್ಷ ಕೋಟಿ) ಆಗಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್ ಅಂದಾಜು ಮಾಡಿದೆ.
ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನ ಷೇರುಗಳನ್ನು ಐಪಿಒ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಿಸಿ, 2026ರ ಮೊದಲಾರ್ಧದಲ್ಲಿ ಷೇರುಪೇಟೆಯಲ್ಲಿ ಅದು ವಹಿವಾಟು ನಡೆಸುವಂತೆ ಮಾಡುವ ನಿರೀಕ್ಷೆ ಇದೆ. ಈ ಷೇರು ಮಾರಾಟವು ದೇಶದ ಬಂಡವಾಳ ಮಾರುಕಟ್ಟೆಯ ಇತಿಹಾಸದಲ್ಲಿ ಅತಿದೊಡ್ಡದಾಗಿರಲಿದೆ ಎಂಬ ಅಂದಾಜು ಕೂಡ ಇದೆ.
ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಪಾಲು ಶೇ 66.3ರಷ್ಟು ಇದೆ. ಫೇಸ್‌ಬುಕ್, ಗೂಗಲ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್ನರ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು ಒಟ್ಟು ಶೇ 32.9ರಷ್ಟು ಪಾಲು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.