ADVERTISEMENT

ಫೋನ್‌ ಪೇಗೆ ನಟ ಸುದೀಪ್‌ ಧ್ವನಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 0:25 IST
Last Updated 27 ಫೆಬ್ರುವರಿ 2024, 0:25 IST
ನಟ ಸುದೀಪ್‌ 
ನಟ ಸುದೀಪ್‌    

ಬೆಂಗಳೂರು: ಹಣ ಪಾವತಿಸಲು ಬಳಸುವ ಫೋನ್‌ ಪೇ ಆ್ಯಪ್‌, ತನ್ನ ಸ್ಮಾರ್ಟ್‌ ಸ್ಪೀಕರ್‌ಗಳಲ್ಲಿ ನಟ ‘ಕಿಚ್ಚ’ ಸುದೀಪ್‌ ಅವರ ಧ್ವನಿಯನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ನಲ್ಲಿ ಸುದೀಪ್‌ ಅವರ ಧ್ವನಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರಲಿದೆ.

ಫೋನ್‌ ಪೇ ತನ್ನ ಸ್ಮಾರ್ಟ್‌ ಸ್ಪೀಕರ್‌ಗಳನ್ನು ವರ್ಷದ ಹಿಂದೆ ಪ್ರಾರಂಭಿಸಿತ್ತು. ಅಂದಿನಿಂದ ದೇಶದ 40 ಲಕ್ಷಕ್ಕೂ ಹೆಚ್ಚು ಜನರು ಈ ಸಾಧನ ಬಳಸುತ್ತಿದ್ದಾರೆ.

ಸರಾಸರಿ ಸ್ಮಾರ್ಟ್‌ ಸ್ಪೀಕರ್‌ಗಳು ಕರ್ನಾಟಕದಲ್ಲಿ ತಿಂಗಳಿಗೆ ₹13.5 ಕೋಟಿಗೂ ಹೆಚ್ಚು ವಹಿವಾಟು ನಡೆಸಿವೆ. ಸೆಲೆಬ್ರಿಟಿ ಧ್ವನಿಯನ್ನು ಬಳಸುವುದರಿಂದ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಪಾವತಿ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಫೋನ್‌ ಪೇ ಮುಖ್ಯ ವಾಣಿಜ್ಯ ಅಧಿಕಾರಿ ಯುವರಾಜ್ ಸಿಂಗ್ ಶೆಖಾವತ್ ಮಾತನಾಡಿ, ದೇಶದ 3.7 ಕೋಟಿಗೂ ಹೆಚ್ಚು ವ್ಯಾಪಾರಿಗಳು ಈ ಸಾಧನ ಬಳಸುತ್ತಿದ್ದಾರೆ. ಪ್ರತಿ ಪಾವತಿಗಾಗಿ ವಿಶಿಷ್ಟ ಭಾಷೆಯನ್ನು ಬಳಸಬೇಕಿದೆ. ಹಾಗಾಗಿ, ಹೆಸರಾಂತ ಖ್ಯಾತನಾಮರೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ  ವ್ಯಾಪಾರಿಗಳ ವಿಭಿನ್ನ ಅಗತ್ಯತೆಯನ್ನು ಸೃಜನಾತ್ಮಕ ರೀತಿಯಲ್ಲಿ ಪೂರೈಸಲು ಈ ಸೇವೆ ಅಳವಡಿಸಿಕೊಳ್ಳುತ್ತಿದ್ದೇವೆ. ಇಂತಹ ಸ್ಮಾರ್ಟ್‌ ಸ್ಪೀಕರ್‌ಗಳು ವ್ಯಾಪಾರಿಗಳು ಮತ್ತು ಗ್ರಾಹಕರು ಆಕರ್ಷಿತರಾಗುವಂತೆ ಮಾಡುತ್ತವೆ ಎಂದು ಹೇಳಿದ್ದಾರೆ.

ಫೋನ್‌ ಪೇ ಇತ್ತೀಚೆಗೆ ತನ್ನ ಸ್ಮಾರ್ಟ್‌ ಸ್ಪೀಕರ್‌ಗಳಲ್ಲಿ ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಅವರ ಸಹಯೋಗದೊಂದಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೆಲೆಬ್ರಿಟಿ ವಾಯ್ಸ್ (ಧ್ವನಿ) ಫೀಚರ್ ಅನ್ನು ಬಿಡುಗಡೆ ಮಾಡಿತ್ತು.  

ಈ ಹೊಸ ಫೀಚರ್ ಸಕ್ರಿಯಗೊಳಿಸುವುದು ಹೇಗೆ?

* ಫೋನ್‌ ಪೇ ಫಾರ್‌ ಬ್ಯುಸಿನೆಸ್‌ ಆ್ಯಪ್ ತೆರೆಯಿರಿ

  • ಮುಖಪುಟದಲ್ಲಿ ಸ್ಮಾರ್ಟ್‌ ಸ್ಪೀಕರ್‌ ವಿಭಾಗಕ್ಕೆ ಹೋಗಿ

  •  ‘ನನ್ನ ಸ್ಮಾರ್ಟ್‌ ಸ್ಪೀಕರ್‌’ ಅಡಿಯಲ್ಲಿ ‘ಸ್ಮಾರ್ಟ್‌ ಸ್ಪೀಕರ್‌ ವಾಯ್ಸ್’ ಮೇಲೆ ಕ್ಲಿಕ್ ಮಾಡಿ

  • ಬಯಸಿದ ಸೆಲೆಬ್ರಿಟಿಗಳ ವಾಯ್ಸ್ ಅನ್ನು ಆದ್ಯತೆಯ ಭಾಷೆಯಲ್ಲಿ ಆಯ್ಕೆ ಮಾಡಿ

  • ವಾಯ್ಸ್ ಅನ್ನು ಸಕ್ರಿಯಗೊಳಿಸಲು ‘ದೃಢೀಕರಿಸಿ’ ಮೇಲೆ ಕ್ಲಿಕ್ ಮಾಡಿ

  • ಆಯ್ದ ಸೆಲೆಬ್ರಿಟಿಗಳ ಧ್ವನಿಯಲ್ಲಿ ಅಪ್‌ಡೇಟ್‌ ಮಾಡಿದ ಭಾಷೆಯೊಂದಿಗೆ ಸಾಧನವು ರೀಬೂಟ್ ಆಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.