ADVERTISEMENT

ಎಲ್‌ಐಸಿ: ಎರಡೇ ದಿನಕ್ಕೆ ಅಷ್ಟೂ ಷೇರುಗಳಿಗೆ ಬಿಡ್‌ ಸಲ್ಲಿಕೆ

ಪಿಟಿಐ
Published 5 ಮೇ 2022, 15:41 IST
Last Updated 5 ಮೇ 2022, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಲ್‌ಐಸಿ ಐಪಿಒಗೆ ಎರಡನೇ ದಿನವೇ ಪೂರ್ಣ ಪ್ರಮಾಣದಲ್ಲಿ ಬಿಡ್‌ ಸಲ್ಲಿಕೆ ಆಗಿದೆ. 16.20 ಕೋಟಿ ಷೇರುಗಳಿಗೆ ಬಿಡ್‌ ಆಹ್ವಾನಿಸಲಾಗಿತ್ತು. 16.68 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆ ಆಗಿದೆ.

ಪಾಲಿಸಿದಾರರಿಗೆ ನಿಗದಿಪಡಿಸಿದ್ದ ಷೇರುಗಳ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಷೇರುಗಳಿಗೆ ಅರ್ಜಿಗಳು ಸಲ್ಲಿಕೆ ಆಗಿವೆ. ಉದ್ಯೋಗಿಗಳಿಗೆ ಮೀಸಲಿಟ್ಟಿದ್ದ ಪಾಲಿಗಿಂತ 2.21ರಷ್ಟು ಹೆಚ್ಚು ಷೇರುಗಳಿಗೆ ಅರ್ಜಿ ಸಲ್ಲಿಕೆ ಆಗಿದೆ.

ರಿಟೇಲ್‌ ಹೂಡಿಕೆದಾರರಿಗೆ 6.9 ಕೋಟಿ ಷೇರುಗಳನ್ನು ಮೀಸಲಿಡಲಾಗಿದೆ. ಈ ಪೈಕಿ ಶೇ 93ರಷ್ಟಕ್ಕೆ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಹ ಸಾಂಸ್ಥಿಕ ಹೂಡಿಕೆದಾರರು (ಕ್ಯುಐಬಿ) ಶೇ 40ರಷ್ಟು ಮತ್ತು ಸಾಂಸ್ಥಿಕೇತರ ಹೂಡಿಕೆದಾರರು ಶೇ 47ರಷ್ಟು ಷೇರುಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಸೋಮವಾರದವರೆಗೆ ಬಿಡ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.