ADVERTISEMENT

ಎಲ್‌ಐಸಿ: ಹೊಸ ಬಿಮಾ ಜ್ಯೋತಿ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 16:39 IST
Last Updated 22 ಫೆಬ್ರುವರಿ 2021, 16:39 IST

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಸುರಕ್ಷತೆ ಮತ್ತು ಉಳಿತಾಯದ ಸಂಯೋಜನೆಯನ್ನು ಒಳಗೊಂಡ ಹೊಸ ‘ಎಲ್‌ಐಸಿ ಬಿಮಾ ಜ್ಯೋತಿ’ ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯು ಪಾಲಿಸಿದಾರರಿಗೆ, ಯೋಜನೆಯ ಅವಧಿಯ ಅಂತ್ಯದಲ್ಲಿ ಒಂದಷ್ಟು ಮೊತ್ತವನ್ನು ನೀಡುವ ಖಾತರಿ ಒದಗಿಸುತ್ತದೆ. ಅಲ್ಲದೆ, ಯೋಜನೆಯ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದಿದಲ್ಲಿ ಆತನ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನೂ ನೀಡಲಿದೆ.

ಪ್ರತಿ ಪಾಲಿಸಿ ವರ್ಷದ ಅಂತ್ಯದ ವೇಳೆಗೆ ಸಾವಿರ ರೂಪಾಯಿ ಕನಿಷ್ಠ ಖಾತರಿ ಹಣಕ್ಕೆ ₹ 50ರಂತೆ ಹೆಚ್ಚುವರಿ ಮೊತ್ತ ನೀಡಲಾಗುವುದು. ಕನಿಷ್ಠ ಖಾತರಿ ಮೊತ್ತ ₹ 1 ಲಕ್ಷ ಇದ್ದು, ಗರಿಷ್ಠ ಮಿತಿ ಇರುವುದಿಲ್ಲ.

ADVERTISEMENT

ಏಜೆಂಟರ ಬಳಿ ಅಥವಾ ಇತರೆ ಮಧ್ಯವರ್ತಿಗಳು ಹಾಗೂ www.licinidia.in ಜಾಲತಾಣದ ಮೂಲಕವೂ ಈ ಯೋಜನೆಯನ್ನು ಖರೀದಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.