ADVERTISEMENT

ಕೇಂದ್ರಕ್ಕೆ ₹7,324 ಕೋಟಿ ಡಿವಿಡೆಂಡ್ ಪಾವತಿಸಿದ ಎಲ್‌ಐಸಿ

ಪಿಟಿಐ
Published 30 ಆಗಸ್ಟ್ 2025, 14:03 IST
Last Updated 30 ಆಗಸ್ಟ್ 2025, 14:03 IST
ಎಲ್‌ಐಸಿ
ಎಲ್‌ಐಸಿ   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 2024–25ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ₹7,324 ಕೋಟಿ ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಎಲ್‌ಐಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ದೊರೈಸ್ವಾಮಿ ಡಿವಿಡೆಂಡ್‌ ಚೆಕ್‌ ಅನ್ನು ಸಲ್ಲಿಸಿದರು. ಈ ವೇಳೆ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜು ಮತ್ತು ಜಂಟಿ ಕಾರ್ಯದರ್ಶಿ ಪರ್ಶಾಂತ್ ಕುಮಾರ್ ಗೋಯಲ್ ಇದ್ದರು.  

ಆಗಸ್ಟ್ 26ರಂದು ನಡೆದ ಎಲ್‌ಐಸಿಯ ವಾರ್ಷಿಕ ಸಾಮಾನ್ಯ ಸಭೆಯು ಈ ಡಿವಿಡೆಂಡ್ ನೀಡಲು ಅನುಮೋದನೆ ನೀಡಿತ್ತು. ಮಾರ್ಚ್‌ 31ರ ವೇಳೆಗೆ ಎಲ್‌ಐಸಿಯ ಒಟ್ಟು ಆಸ್ತಿ ಮೌಲ್ಯ ₹56.23 ಲಕ್ಷ ಕೋಟಿಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.